ADVERTISEMENT

ಕರಾವಳಿ ಹುಡುಗಿಯ ಕವರ್‌ಡ್ರೈವ್‌ಗೆ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 15:59 IST
Last Updated 12 ಜೂನ್ 2020, 15:59 IST
ಇಎಸ್‌ಪಿಎನ್‌ ಕ್ರಿಕ್‌ಇನ್‌ಫೋ ಟ್ವಿಟ್ಟರ್ ಪುಟ
ಇಎಸ್‌ಪಿಎನ್‌ ಕ್ರಿಕ್‌ಇನ್‌ಫೋ ಟ್ವಿಟ್ಟರ್ ಪುಟ   

ಉಡುಪಿ: ಕಾರ್ಕಳದ ಯುವತಿಯೊಬ್ಬರು ಮನೆಯಂಗಳದಲ್ಲಿ ಕ್ರಿಕೆಟ್‌ ಆಡುವಾಗ ಹೊಡೆದ ಕವರ್ ಡ್ರೈವ್‌ ಶಾಟ್‌ ಅನ್ನು ಇಎಸ್‌ಪಿಎನ್ ಕ್ರಿಕ್‌ಇನ್ಫೋ ಟ್ವಿಟ್ಟರ್ ಪುಟದಲ್ಲಿ ಹಾಕಿ ಮೆಚ್ಚುಗೆ ಸೂಚಿಸಿದೆ.

ರಂಜಿತ್ ಪೂಜಾರಿ ಎಂಬುವರು ಹಾಕಿದ್ದ ವಿಡಿಯೋವನ್ನು ಮರು ಟ್ವೀಟ್‌ ಮಾಡಿದ್ದು, ಯುವತಿಯ ಕವರ್ ಡ್ರೈವ್ ವೀಕ್ಷಣೆ ಮಾಡಿದ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕವರ್‌ ಡ್ರೈವ್ ಮಾಡಿದ ಯುವತಿ ಕಾರ್ಕಳದ ಕೆರ್ವಾಶೆಯ ಜ್ಯೋತಿ ಪೂಜಾರಿ ಎನ್ನಲಾಗಿದ್ದು, ಬಿಡುವಿನ ವೇಳೆಯಲ್ಲಿ ಕುಟುಂಬ ಸದಸ್ಯರ ಜತೆ ಕ್ರಿಕೆಟ್‌ ಆಡುವಾಗ ತೆಗೆದ ವಿಡಿಯೋ ಇದಾಗಿದೆ.https://twitter.com/ESPNcricinfo ವೀಕ್ಷಿಸಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.