ADVERTISEMENT

ನಿರ್ಮಲಾ ಕಾಲೇಜು: ಶೇ100 ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 15:10 IST
Last Updated 14 ಜುಲೈ 2020, 15:10 IST
ಯಶಸ್ವಿನಿ‌
ಯಶಸ್ವಿನಿ‌   

ಬ್ರಹ್ಮಾವರ: ಇಲ್ಲಿಯ ನಿರ್ಮಲಾ ಸಂಯುಕ್ತ ಪದವಿ ಪೂರ್ವ ಕಾಲೇಜು ಶೇ 100 ಫಲಿತಾಂಶ ದಾಖಲಿಸಿದೆ

ದ್ವಿತೀಯ ಪಿಯುಸಿಯ ವಾಣಿಜ್ಯ ವಿಭಾಗದಲ್ಲಿ 36 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 7 ಮಂದಿ ವಿಶಿಷ್ಟ ಶ್ರೇಣಿ, 26 ಮಂದಿ ಪ್ರಥಮ ಶ್ರೇಣಿ, 2 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕಾಲೇಜಿನ ವಿದ್ಯಾರ್ಥಿನಿ ಯಶಸ್ವಿನಿ 567 ಅಂಕ ಗಳಿಸಿದ್ದಲ್ಲದೇ, ಕನ್ನಡ ವಿಷಯದಲ್ಲಿ 100 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಕೊಕ್ಕರ್ಣೆ ಕಾಲೇಜು: ಕೊಕ್ಕರ್ಣೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ದ್ವಿತೀಯ ಪಿಯುಸಿಯಲ್ಲಿ ಶೇ 94.44 ಫಲಿತಾಂಶ ಪಡೆದಿದೆ. ಕಾಲೇಜಿನಿಂದ ಪರೀಕ್ಷೆ ಬರೆದ 54ವಿದ್ಯಾರ್ಥಿಗಳಲ್ಲಿ 51 ಮಂಧಿ ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಶೇ 100 ಫಲಿತಾಂಶ ದಾಖಲಾಗಿದೆ. ಇಬ್ಬರು ವಿಶಿಷ್ಟ ದರ್ಜೆ, 33 ಮಂದಿ ಪ್ರಥಮ ದರ್ಜೆ, 10 ಮಂದಿ ದ್ವಿತೀಯ ದರ್ಜೆ ಮತ್ತು 6 ಮಂದಿ ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಶ್ರೀಧರ್ ಶೆಟ್ಟಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.