ADVERTISEMENT

ಶಿರ್ವ: ಪಾಜಕ ಕ್ಷೇತ್ರದಲ್ಲಿ ಮಧ್ವನವಮಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2023, 4:35 IST
Last Updated 31 ಜನವರಿ 2023, 4:35 IST
ಮಧ್ವನವಮಿ ಪ್ರಯುಕ್ತ ಆಚಾರ್ಯ ಮಧ್ವರ ಅವತಾರ ಭೂಮಿ ಪಾಜಕಕ್ಷೇತ್ರದಲ್ಲಿ ನಡೆದ ವೈವಿಧ್ಯಮಯ ಕಾರ್ಯಗಳು ಕಾಣಿಯೂರು ಮಠಾಧೀಶ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಉಪಸ್ಥಿತಿಯಲ್ಲಿ ನಡೆದವು
ಮಧ್ವನವಮಿ ಪ್ರಯುಕ್ತ ಆಚಾರ್ಯ ಮಧ್ವರ ಅವತಾರ ಭೂಮಿ ಪಾಜಕಕ್ಷೇತ್ರದಲ್ಲಿ ನಡೆದ ವೈವಿಧ್ಯಮಯ ಕಾರ್ಯಗಳು ಕಾಣಿಯೂರು ಮಠಾಧೀಶ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಉಪಸ್ಥಿತಿಯಲ್ಲಿ ನಡೆದವು   

ಶಿರ್ವ: ಆಚಾರ್ಯ ಮಧ್ವರ ಅವತಾರ ಭೂಮಿ ಪಾಜಕಕ್ಷೇತ್ರದಲ್ಲಿ ಮಧ್ವನವಮಿ ಪ್ರಯುಕ್ತ ಪಂಚಾಮೃತ ಅಭಿಷೇಕ, ವಾಯುಸ್ತುತಿ ಪುನಶ್ಚರಣೆ, ಋಕ್ ಸಂಹಿತಾ ಯಾಗದ ಪೂರ್ಣಾಹುತಿ, ಪ್ರವಚನ, ಭಜನೆ ಮತ್ತಿತರ ಅಧ್ಯಾತ್ಮಿಕ, ಧಾರ್ಮಿಕ ಕಾರ್ಯಕ್ರಮಗಳು ಈಚೆಗೆ ನಡೆದವು.

ಕಾಣಿಯೂರು ಮಠಾಧೀಶ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿ, ಭಗವಂತನಲ್ಲಿ ಭಕ್ತಿಯ ಅರಿವು ಬರಬೇಕಾದರೆ ತತ್ವಜ್ಞಾನದ ಅರಿವು ಇರಬೇಕು ಎಂದು ಅಭಿಪ್ರಾಯಪಟ್ಟರು.

ದೇವರು ಸರ್ವೋತ್ತಮ, ಗುಣಪರಿಪೂರ್ಣ ಎಂಬ ಸ್ವರೂಪ ಜ್ಞಾನ ತಿಳಿಸಿಕೊಟ್ಟು ಗೊಂದಲಗಳನ್ನು ನಿವಾರಿಸಿ ಜಗತ್ತಿಗೆ ತತ್ವಜ್ಞಾನವನ್ನು ನೀಡಿದವರು ಮಧ್ವಾಚಾರ್ಯರು ಎಂದರು.

ADVERTISEMENT

ವಾದಿರಾಜ ಯತಿಗಳಿಂದ ಪ್ರತಿಷ್ಠಿತ ಮಧ್ವಾಚಾರ್ಯರ ಪ್ರತಿಮೆಗೆ ಮಹಾಪೂಜೆಯನ್ನು ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.