ಉಡುಪಿ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯಕ್ಕೆ ನಿಯೋಜನೆ ಕುರಿತ ಆದೇಶ ಸ್ವೀಕರಿಸದೆ ನಿರ್ಲಕ್ಷ್ಯಿಸಿದ್ದ ಮೂವರು ಶಿಕ್ಷಕಿಯರನ್ನು ಅಮಾನತು ಮಾಡಲಾಗಿದೆ.
ಒಳಕಾಡು ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕಿಯರಾದ ಸುರೇಖ, ರತ್ನಾ, ಉದ್ಯಾವರ ಸರ್ಕಾರಿ ಪಿಯು ಕಾಲೇಜಿನ ಪ್ರೌಢಶಾಲಾ ಸಹಶಿಕ್ಷಕಿ ಪ್ರಭಾ ಬಿ. ಅಮಾನತುಗೊಂಡಿರುವವರು.
‘ಹಲವು ಬಾರಿ ಸಂಪರ್ಕಿಸಿದರೂ ಆದೇಶ ಪ್ರತಿ ಸ್ವೀಕರಿಸಿಲ್ಲ. ನೋಟಿಸ್‌ಗೂ ಸಮಜಾಯಿಷಿ ನೀಡಿದ ಕಾರಣ ಅಮಾನತು ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.