ADVERTISEMENT

ಬ್ರಹ್ಮಾವರ | ಆರೂರು ದೇವಸ್ಥಾನ: ವಿಶ್ವರೂಪ ದರ್ಶನ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 6:21 IST
Last Updated 6 ನವೆಂಬರ್ 2025, 6:21 IST
ಆರೂರು ಮಹತೋಬಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಮಂಗಳವಾರ ವೈಕುಂಠ ಚತುರ್ದಶಿಯಂದು ವಿಶ್ವರೂಪದ ದರ್ಶನ ಕಾರ್ಯಕ್ರಮ ನಡೆಯಿತು.
ಆರೂರು ಮಹತೋಬಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಮಂಗಳವಾರ ವೈಕುಂಠ ಚತುರ್ದಶಿಯಂದು ವಿಶ್ವರೂಪದ ದರ್ಶನ ಕಾರ್ಯಕ್ರಮ ನಡೆಯಿತು.   

ಬ್ರಹ್ಮಾವರ: ಆರೂರು ಮಹತೋಭಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವೈಕುಂಠ ಚತುರ್ದಶಿಯಂದು ಮಂಗಳವಾರ ವಿಶ್ವರೂಪದ ದರ್ಶನ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

ಉಡುಪಿ ಕೃಷ್ಣಾಪುರ ಮಠದ ವಿದ್ಯಾಸಾಗರತೀರ್ಥ ಸ್ವಾಮೀಜಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು. ದೇವಸ್ಥಾನದ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ಎ. ರತ್ನಾಕರ್ ಭಟ್, ಆರೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗುರುರಾಜ ರಾವ್ ಪೂರ್ಣಕುಂಭ ಸ್ವಾಗತ ಮಾಡಿ ಅವರನ್ನು ದೇವಸ್ಥಾನಕ್ಕೆ ಬರಮಾಡಿಕೊಂಡರು.

ಆರೂರು ಶಾಲೆಯ ಸಂಚಾಲಕ ಎ.ಎಂ. ಮೋಹನ್ ರಾವ್ ಬಳಗದವರಿಂದ ಸಂಕೀರ್ತನೆ ನಡೆಯಿತು. ಮೈರ್ಮಾಡಿ ಅಶೋಕ ಕುಮಾರ್ ಶೆಟ್ಟಿ, ನಳಿನಿ ಪ್ರದೀಪ ರಾವ್, ಮಮತಾ ಶೆಟ್ಟಿ, ಅರ್ಚಕರಾದ ರವಿಶರ್ಮ ಭಟ್, ಲಕ್ಷ್ಮೀನಾರಾಯಣ ಭಟ್, ಗಣಪತಿ ಭಟ್, ಗಿರಿಧರ ಭಟ್, ಸುಬ್ರಹ್ಮಣ್ಯ ಭಟ್, ಶ್ರೀನಿವಾಸ ಭಟ್, ಸದಸ್ಯರಾದ ಅರುಣ ಕುಮಾರ್ ಶೆಟ್ಟಿ, ಸಂತೋಷ ಕುಲಾಲ, ರತ್ನಾಕರ ನಾಯ್ಕ, ಈಶ್ವರ ಸೇರಿಗಾರ್, ವನಿತಾ ಸಿ. ರಾವ್, ಕೊಡವೂರು ರಾಜ ಸೇರಿಗಾರ್, ಕೃಷ್ಣ ನಾಯಕ್, ನರಸಿಂಹ ನಾಯಕ್, ವಾದ್ಯ ವೃಂದದ ರವಿ ಸೇರಿಗಾರ್, ಅನಂತ ಸೇರಿಗಾರ್, ಗಣೇಶ ಕುಲಾಲ, ಮಹಿಳಾ ಭಜನಾ ಮಂಡಳಿ ಸದಸ್ಯರು, ಯುವಕ ಮಂಡಲ ಸದಸ್ಯರು, ಯುವ ಆರೂರು ಸದಸ್ಯರು ಭಾಗವಹಿಸಿದ್ದರು.

ADVERTISEMENT