ADVERTISEMENT

‘ಚೌಕಿದಾರ್ ಶೇರ್ ಹೇ’ ಸ್ಟಿಕ್ಕರ್ ಅಂಟಿಸಿದ ಕಾರು ವಶ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 16:10 IST
Last Updated 5 ಏಪ್ರಿಲ್ 2019, 16:10 IST
ಚುನಾವಣಾಧಿಕಾರಿಗಳು ವಶಪಡಿಸಿಕೊಂಡ ಕಾರು
ಚುನಾವಣಾಧಿಕಾರಿಗಳು ವಶಪಡಿಸಿಕೊಂಡ ಕಾರು   

ಕಾರ್ಕಳ: ಕಾರಿಗೆ ನಿಯಮ ಬಾಹಿರವಾಗಿ 'ಚೌಕಿದಾರ್ ಶೇರ್ ಹೇ' ಎಂಬ ಸ್ಟಿಕ್ಕರ್ ಅಂಟಿಸಿದ ಹಾಗೂ ಚುನಾವಣಾ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬರ ವಿರುದ್ಧ ಕಾರ್ಕಳದಲ್ಲಿ ಪ್ರಕರಣ ದಾಖಲಿಸಲಾಗಿದೆ. ಜತೆಗೆ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಕಾರ್ಕಳದ ಅನಂತಶಯನದಲ್ಲಿ ಶುಕ್ರವಾರ ಬೆಳಿಗ್ಗೆ ಚುನಾವಣಾ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾಗ ಕಾರಿನ ಹಿಂಭಾಗದಲ್ಲಿ ‘ಚೌಕಿದಾರ್ ಶೇರ್ ಹೇ’ ಎಂಬ ಸ್ಟಿಕ್ಕರ್ ಬರೆಸಿಕೊಂಡಿದ್ದು ಪತ್ತೆಯಾಯಿತು. ಸ್ಟಿಕ್ಕರ್ ತೆಗೆಯುವಂತೆ ಅಧಿಕಾರಿಗಳು ಕಾರು ಚಾಲಕ ವಿಪುಲ್ ತೇಜ್ ಅವರಿಗೆ ಸೂಚಿಸಿದ್ದರು.

ಆದರೆ, ಅವರು ನಿರಾಕರಿಸಿ ಅಧಿಕಾರಿಗಳನ್ನು ಏರುಧ್ವನಿಯಲ್ಲಿ ಪ್ರಶ್ನಿಸಿದರು. ಜತೆಗೆ, ಸ್ಟಿಕ್ಕರ್ ತೆಗೆಯಲು ನಿರಾಕರಿಸಿದ್ದರಿಂದ ಅಧಿಕಾರಿಗಳು ಕಾರನ್ನು ವಶಪಡಿಸಿಕೊಂಡು, ವಿಪುಲ್ ತೇಜ್ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.