
ಕೋಟ (ಬ್ರಹ್ಮಾವರ): ಕೋಟತಟ್ಟು ಗ್ರಾಮ ಪಂಚಾಯಿತಿ, ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ, ಕರಾವಳಿ ನಿವೃತ್ತ ವಾಯುಸೇನಾ ಯೋಧರ ಸಂಘದ ಆಶ್ರಯದಲ್ಲಿ ಕೋಟ ಕಾರಂತ ಕಲಾಭವನದಲ್ಲಿ ಭಾನುವಾರ ಯೋಧರೊಂದಿಗೆ ನಡಿಗೆ, ನಿವೃತ್ತ ಯೋಧರಿಗೆ ಗೌರವ ಕಾರ್ಯಕ್ರಮ ನಡೆಯಿತು.
ಹುತಾತ್ಮ ಯೋಧ ಅನೂಪ್ ಪೂಜಾರಿ ಪತ್ನಿ ಮಂಜುಶ್ರೀ ಜಾಥಾಕ್ಕೆ ಚಾಲನೆ ನೀಡಿದರು. ನೂರಾರು ನಿವೃತ್ತ ಯೋಧರು, ಸೇನಾ ತರಬೇತಿ ಶಾಲೆಯ ವಿದ್ಯಾರ್ಥಿಗಳು, ಸಾರ್ವಜನಿಕರು ಕೋಟ ಅಮೃತೇಶ್ವರಿ ದೇವಸ್ಥಾನದಿಂದ ಕಾರಂತ ಕಲಾಭವನದವರೆಗೆ ಜಾಥಾ ನಡೆಸಿದರು. ಬಳಿಕ ಥೀಮ್ ಪಾರ್ಕ್‌ನಲ್ಲಿರುವ ಮಿಗ್– 21 ಯುದ್ಧ ವಿಮಾನದ ಬಳಿ ಗಣರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ನೆರವೇರಿಸಲಾಯಿತು.
ಮಿಗ್– 21 ಯುದ್ಧ ವಿಮಾನದಲ್ಲಿ ಕರ್ತವ್ಯ ಸಲ್ಲಿಸಿದ ವಾರಂಟ್ ಆಫೀಸರ್ ಶ್ರೀಧರ ಭಟ್, ಹಿರಿಯ ಅಧಿಕಾರಿಗಳಾದ ವ್ಯಾಸರಾಜ, ಮೋಹನ ದಾಸ್ ಶೆಟ್ಟಿ, ವಿಕ್ಟರ್, ಸುನಿಲ್ ಶೆಣೈ, ಶಿವಪ್ರಸಾದ್, ಸುಧಾಕರ ದೇವಾಡಿಗ, ಸುಭಾಷ್ ಶಾಸ್ತ್ರಿ, ಶ್ರೀನಿವಾಸ ಗಾಣಿಗ, ಯಶವಂತ ಶೆಟ್ಟಿ ಅವರನ್ನು ಗೌರವಿಸಲಾಯಿತು. ಉದ್ಯಮಿ ಬಂಜಾರ ಕೆ. ಪ್ರಕಾಶ್ ಶೆಟ್ಟಿ ಸನ್ಮಾನ ನೆರವೇರಿಸಿದರು.
ನಿವೃತ್ತ ಯೋಧರ ಪರವಾಗಿ ನಿವೃತ್ತ ಮೇಜರ್ ಜನರಲ್ ಎಮ್.ವಿ.ಭಟ್, ರಮೇಶ್ ಕಾರ್ಣಿಕ್, ಅತುಲ್ ಕುಮಾರ್ ರಸ್ತೋಗಿ ಮಾತನಾಡಿದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರಂತ ಪ್ರತಿಷ್ಠಾನದ ಗೌರವಾಧ್ಯಕ್ಷ ಉದ್ಯಮಿ ಆನಂದ ಕುಂದರ್ ಸ್ವಾಗತಿಸಿದರು. ನಿವೃತ್ತ ಯೋಧ ಜಾರ್ಜೆಡ್ಡು ಶ್ರೀನಿವಾಸ ಗಾಣಿಗ ನಿವೃತ್ತ ಸೈನಿಕರನ್ನು ಪರಿಚಯಿಸಿದರು. ವಿಜಯಭಟ್ ಕಡೆಕಾರು ವಂದೇ ಮಾತರಂ ಹಾಡಿದರು. ಪಿಡಿಒ ರವೀಂದ್ರ ರಾವ್ ನಿರೂಪಿಸಿದರು.
ಶಾಸಕ ಕಿರಣ್ ಕುಮಾರ್ ಕೊಡ್ಗಿ, ಕುಂದಾಪುರ ಉಪ ವಿಭಾಗಧಿಕಾರಿ ರಶ್ಮಿ, ಉದ್ಯಮಿಗಳಾದ ಶ್ರೀಕೃಷ್ಣ ಆಗ್ರೊ ಇಂಡಸ್ಟ್ರೀಸ್ ಮಾಲೀಕ, ಸಂಪತ್ ಕುಮಾರ್ ಶೆಟ್ಟಿ, ಸುಗ್ಗಿ ಸುಧಾಕರ ಶೆಟ್ಟಿ, ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ ಕುಂದರ್, ಕೋಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಭರತ ಕುಮಾರ್ ಶೆಟ್ಟಿ, ಕಾರಂತ ಭವನ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.