ADVERTISEMENT

ನೀರು ಪೂರೈಕೆಯಲ್ಲಿ ತೊಂದರೆ: ಮನವಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 14:25 IST
Last Updated 3 ಡಿಸೆಂಬರ್ 2022, 14:25 IST
ಪಲಿಮಾರು ಅಣೆಕಟ್ಟೆ ಅಸಮರ್ಪಕ ನಿರ್ವಹಣೆಯಿಂದ ಹೊಯಿಗೆ ಗ್ರಾಮಕ್ಕೆ ನೀರು ಪೂರೈಕೆಯಾಗದೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಹೊಯಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು
ಪಲಿಮಾರು ಅಣೆಕಟ್ಟೆ ಅಸಮರ್ಪಕ ನಿರ್ವಹಣೆಯಿಂದ ಹೊಯಿಗೆ ಗ್ರಾಮಕ್ಕೆ ನೀರು ಪೂರೈಕೆಯಾಗದೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಹೊಯಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು   

ಪಡುಬಿದ್ರಿ: ಪಲಿಮಾರು ಅಣೆಕಟ್ಟೆ ಅಸಮರ್ಪಕ ನಿರ್ವಹಣೆಯಿಂದ ಹೊಯಿಗೆ ಗ್ರಾಮಕ್ಕೆ ನೀರು ಪೂರೈಕೆಯಾಗದೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಹೊಯಿಗೆ ಗ್ರಾಮಸ್ಥರು ಶನಿವಾರ ಪಲಿಮಾರು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದರು.

ಹೊಯಿಗೆ, ಅವರಾಲು ಮಟ್ಟು ಪ್ರದೇಶಗಳಿಗೆ ಎರಡು ವರ್ಷಗಳಿಂದ ಸಮರ್ಪಕವಾಗಿ ನೀರು ಹರಿಯದೆ ಕೃಷಿಕರು, ಜಾನುವಾರುಗಳಿಗೆ ಸಮಸ್ಯೆಗಳಾಗಿವೆ. ಅಂತರ್ಜಲ ಮಟ್ಟ ಕುಸಿತಕ್ಕೊಳಗಾಗಿದೆ ಎಂದು ಗ್ರಾಮಸ್ಥರು ದೂರಿದರು. ಈ ಬಗ್ಗೆ ಗ್ರಾಮ ಪಂಚಾಯಿತಿ ಹಾಗೂ ಇಲಾಖೆ ತುರ್ತು ಗಮನಹರಿಸಿ ಕ್ರಮವಹಿಸುವಂತೆ ಅವರು ಆಗ್ರಹಿಸಿದರು.

ಪಲಿಮಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಾಯತ್ರಿ ಡಿ. ಪ್ರಭು ಹಾಗೂ ಪಿಡಿಒ ಶಶಿಧರ ಆಚಾರ್ಯ ಅವರು ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಗಾಯತ್ರಿ ಪ್ರಭು, ಅಣೆಕಟ್ಟೆ ನೀರಿನ ಪ್ರಮಾಣ ಹೆಚ್ಚಳದಿಂದ ಸುತ್ತಲಿನ ಗ್ರಾಮಕ್ಕೆ ತೊಂದರೆಯಾಗುವ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ಇಲಾಖೆ ಗೇಟ್ ತೆರವು ಮಾಡಿ ತೊಂದರೆಯಾಗಿತ್ತು. ಇದೀಗ ಮತ್ತೆ ಗೇಟ್ ಹಾಕಲಾಗಿದ್ದು, ಗ್ರಾಮಸ್ಥರಿಗೆ ತೊಂದರೆಯಾಗದಂತೆ ಎಚ್ಚರವಹಿಸಲಾಗುವುದು ಎಂದು ಭರವಸೆ ನೀಡಿದರು.

ADVERTISEMENT

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಜಿತೇಂದ್ರ ಪುರ್ಟಾಡೊ, ಗಿರಿಯಪ್ಪ ಪೂಜಾರಿ, ಮಧುಕರ ಸುವರ್ಣ, ಗ್ರಾಮ ಪಂಚಾಯಿತಿ ಸದಸ್ಯರಾದ ಜಯಂತಿ, ಯೋಗಾನಂದ, ಯಶವಂತ್ ಸ್ಥಳೀಯರಾದ ರಾಘವೇಂದ್ರ ಸುವರ್ಣ, ಜೇಮ್ಸ್ ಡಿಸೋಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.