ಹೆಬ್ರಿ: ಮುದ್ರಾಡಿ ಗ್ರಾಮ ಪಂಚಾಯಿತಿಯ 2025–26ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಅಧ್ಯಕ್ಷೆ ವಸಂತಿ ಪೂಜಾರಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು.
ಗ್ರಾಮ ಸಭೆಯ ಮಾರ್ಗದರ್ಶಿ ಅಧಿಕಾರಿಯಾಗಿದ್ದ ಸಿಆರ್‌ಪಿಒ ರಾಘವೇಂದ್ರ ಆಚಾರ್ಯ ಶಿಕ್ಷಣ ಇಲಾಖೆಯ ಮಾಹಿತಿ ನೀಡಿದರು. ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್, ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ಸಂತೋಷ ಕುಮಾರ್ ಬೈಲೂರು, ವಲಯ ಉಪ ಅರಣ್ಯಾಧಿಕಾರಿ ಪ್ರದೀಪ್, ಮುದ್ರಾಡಿ ಗ್ರಾಮ ಆಡಳಿತಾಧಿಕಾರಿ ನವೀನ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ ಮೇಲ್ವಿಚಾರಕಿ ಗುಣವತಿ ಮಾಹಿತಿ ನೀಡಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಿರಿಸಿದ ಸ್ವಂತ ಸಂಪನ್ಮೂಲದ ಶೇ 25ರಡಿ 32 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯಧನ, ಇಬ್ಬರಿಗೆ ಅಂತ್ಯಸಂಸ್ಕಾರ ಸಹಾಯಧನ, ಮೂವರಿಗೆ ಅನಿಲ ಸಂಪರ್ಕ ಸಹಾಯಧನ, ಶೇ 5ರಡಿ 7 ಅಂಗವಿಕಲ ಫಲಾನುಭವಿಗಳಿಗೆ ಸಹಾಯಧನದ ಚೆಕ್ ವಿತರಿಸಲಾಯಿತು.
ನಿವೃತ್ತಿ ಹೊಂದಿದ ಕೃಷಿ ಸಹಾಯಕ ಅಧಿಕಾರಿ ಸಿದ್ದಪ್ಪ ಬಿ. ತುಡಬಿನ, ಜಾನುವಾರು ಅಭಿವೃದ್ಧಿ ಅಧಿಕಾರಿ ನಾಗೇಶ್ ಪೈ ಅವರನ್ನು ಸನ್ಮಾನಿಸಲಾಯಿತು. ಪಂಚಾಯಿತಿ ವ್ಯಾಪ್ತಿಯ ಜರ್ವತ್ತು ಹಿಂದೂ ಸ್ಮಶಾನಕ್ಕೆ ಸಿಲಿಕಾನ್ ಛೇಂಬರ್ ಕೊಡುಗೆ ನೀಡಿದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪರವಾಗಿ ತಾಲ್ಲೂಕು ಯೋಜನಾಧಿಕಾರಿ ಲೀಲಾವತಿ ಅವರನ್ನು ಸನ್ಮಾನಿಸಲಾಯಿತು.
ಪಂಚಾಯಿತಿ ಉಪಾಧ್ಯಕ್ಷೆ ರಮ್ಯಕಾಂತಿ, ಸದಸ್ಯ ಎಂ. ಗಣಪತಿ ಮಾತನಾಡಿದರು. ಸಭೆಯಲ್ಲಿದ್ದ ಸರ್ವರೂ ‘ನಶೆ ಮುಕ್ತ ಭಾರತ’ ಪ್ರಮಾಣ ವಚನ ಸ್ವೀಕರಿಸಿದರು. ಓಂ ಶಕ್ತಿ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಪ್ರಮಾಣವಚನ ಬೋಧಿಸಿದರು.
ಗ್ರಾ.ಪಂ. ಸದಸ್ಯರಾದ ಮಂಜುನಾಥ ಹೆಗ್ಡೆ, ಶುಭದರ ಶೆಟ್ಟಿ, ಸನತ್ ಕುಮಾರ್, ಸಂತೋಷ ಕುಮಾರ್ ಶೆಟ್ಟಿ, ಜಗದೀಶ ಪೂಜಾರಿ, ರತ್ನಾ ಪೂಜಾರಿ, ಜಯಂತಿ ಗೌಡ, ನಾಗಶ್ರೀ, ಶಾಂತಾ ದಿನೇಶ ಪೂಜಾರಿ, ವನಿತಾ ಎನ್. ರಾವ್, ಪಲ್ಲವಿ ಎಸ್.ಆರ್, ಕಾರ್ಕಳ ವನ್ಯಜೀವಿ ವಲಯ ಉಪ ವಲಯ ಅರಣ್ಯಾಧಿಕಾರಿ ಅಭಿನಂದನ್ ಆನಂದ ಹೆಗ್ಡೆ, ಗಸ್ತು ಅರಣ್ಯಪಾಲಕ ದೇವಾನಂದ, ಕೃಷಿ ಇಲಾಖೆಯ ರಾಘವೇಂದ್ರ, ಪಶುಸಂಗೋಪನಾ ಇಲಾಖೆಯ ಸಮೀತ್ ಬೇವಿನಕಟ್ಟಿ, ಸಮುದಾಯ ಆರೋಗ್ಯ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗ್ರಾ.ಪಂ. ಸಿಬ್ಬಂದಿ, ಓಂ ಶಕ್ತಿ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಗ್ರಾಮಸ್ಥರು ಭಾಗವಹಿಸಿದ್ದರು. ಗುಮಾಸ್ತ ಪದ್ಮನಾಭ ಆರ್. ಕುಲಾಲ್ ನಿರೂಪಿಸಿ ವರದಿ ಮಂಡಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಮೃತಾ ಕುಲಾಲ್ ಸ್ವಾಗತಿಸಿದರು. ಕಾರ್ಯದರ್ಶಿ ಶೋಭಾವತಿ ಶೆಟ್ಟಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.