ADVERTISEMENT

ರಾಸಾಯನಿಕ ಸಿಂಪರಣೆ ವದಂತಿ: ಬಾವಿಗಳಿಗೆ ಪ್ಲಾಸ್ಟಿಕ್ ಹೊದಿಕೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2020, 14:24 IST
Last Updated 22 ಮಾರ್ಚ್ 2020, 14:24 IST
ಜನತಾ ಕರ್ಫ್ಯೂ ದಿನ ಹೆಲಿಕಾಪ್ಟರ್‌ನಲ್ಲಿ ರಾಸಾಯನಿಕ ಸಿಂಪರಣೆ ಮಾಡುತ್ತಾರೆ ಎಂಬ ವದಂತಿ ನಂಬಿ ಉಡುಪಿಯ ಹಲವೆಡೆ ಬಾವಿಗಳಿಗೆ ಪ್ಲಾಸ್ಟಿಕ್ ಹೊದಿಸಲಾಗಿತ್ತು.
ಜನತಾ ಕರ್ಫ್ಯೂ ದಿನ ಹೆಲಿಕಾಪ್ಟರ್‌ನಲ್ಲಿ ರಾಸಾಯನಿಕ ಸಿಂಪರಣೆ ಮಾಡುತ್ತಾರೆ ಎಂಬ ವದಂತಿ ನಂಬಿ ಉಡುಪಿಯ ಹಲವೆಡೆ ಬಾವಿಗಳಿಗೆ ಪ್ಲಾಸ್ಟಿಕ್ ಹೊದಿಸಲಾಗಿತ್ತು.   

ಉಡುಪಿ: ಕೊರೊನಾ ವೈರಸ್‌ ನಾಶಕ್ಕೆ ಕೇಂದ್ರ ಸರ್ಕಾರ ಹೆಲಿಕಾಪ್ಟರ್‌ ಮೂಲಕ ರಾಸಾಯನಿಕ ಸಿಂಪರಣೆ ಮಾಡಿಸಲು ನಿರ್ಧರಿಸಿದೆ ಎಂಬ ವದಂತಿ ನಂಬಿ ಉಡುಪಿಯ ಹಲವೆಡೆ ಬಾವಿಗಳಿಗೆ ಪ್ಲಾಸ್ಟಿಕ್ ಹೊದಿಸಲಾಗಿತ್ತು.

ಫೇಸ್‌ಬುಕ್‌, ವಾಟ್ಸ್‌ ಆ್ಯಪ್‌ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ನೋಡಿ ಬೆಚ್ಚಿಬಿದ್ದ ಸಾರ್ವಜನಿಕರು ಶನಿವಾರ ರಾತ್ರಿಯೇ ಬಾವಿಗಳಿಗೆ ಪ್ಲಾಸ್ಟಿಕ್ ಹೊದಿಕೆ ಹಾಕಿದ್ದರು. ಕೆಲವರು ಬಟ್ಟೆಯನ್ನು ಮನೆಯ ಹೊರಗೆ ಒಣ ಹಾಕಿರಲಿಲ್ಲ. ರಾಸಾಯನಿಕ ಸಿಂಪರಣೆಯ ವದಂತಿಯಿಂದ ಕೆಲವರು ಜನತಾ ಕರ್ಫ್ಯೂ ದಿನ ಹೊರಗೆ ಬರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT