ADVERTISEMENT

ಕಾರ್ಕಳದಲ್ಲಿ ಸುಳಿಗಾಳಿಯ ಅಬ್ಬರ

​ಪ್ರಜಾವಾಣಿ ವಾರ್ತೆ
Published 28 ಜನವರಿ 2023, 15:23 IST
Last Updated 28 ಜನವರಿ 2023, 15:23 IST
ಕಾರ್ಕಳ ನಗರದ ಗಾಂಧಿ ಮೈದಾನದಲ್ಲಿ ಆಕಾಶದೆತ್ತರಕ್ಕೆ ಸುಳಿಗಾಳಿ ಕಾಣಿಸಿಕೊಂಡಿತು.
ಕಾರ್ಕಳ ನಗರದ ಗಾಂಧಿ ಮೈದಾನದಲ್ಲಿ ಆಕಾಶದೆತ್ತರಕ್ಕೆ ಸುಳಿಗಾಳಿ ಕಾಣಿಸಿಕೊಂಡಿತು.   

ಕಾರ್ಕಳ: ನಗರದ ಗಾಂಧಿ ಮೈದಾನದಲ್ಲಿ ಆಕಾಶದೆತ್ತರಕ್ಕೆ ಸುಳಿಗಾಳಿ ಕಾಣಿಸಿಕೊಂಡಿತು. ಈ ಪ್ರಾಕೃತಿಕ ವಿದ್ಯಮಾನ ಕಂಡು ಗಾಂಧಿ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ಯುವಕರು ಹಾಗೂ ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿದರು.

ಸುಳಿಯಾಕಾರದಲ್ಲಿ ಧೂಳು ಹಾಗೂ ಗಾಳಿ ಮುಗಿಲೆತ್ತರಕ್ಕೆ ಚಿಮ್ಮಿತು. ಮೈದಾನದಲ್ಲಿದ್ದ ಕಸ, ಗಿಡಗಂಟಿಯನ್ನೆಲ್ಲ ಮೇಲಕೆತ್ತಿ ಬಿಸಾಡಿತು. ಕೆಲ ನಿಮಿಷಗಳ ಕಾಲ ಜನರು ಸುಳಿಗಾಳಿಯ ವೀಕ್ಷಿಸಿದರು.

ಕಾರ್ಕಳ ಪಶ್ಚಿಮ ಘಟ್ಟದ ತಪ್ಪಲಿನ ಪ್ರದೇಶವಾಗಿದ್ದು ಮೂಡುಬಿದರೆ, ಅಜೆಕಾರು, ಬೆಳಪು ಪರಿಸರದಲ್ಲೂ ಹಿಂದೆ ಸುಳಿಗಾಳಿ ಕಾಣಿಸಿಕೊಂಡಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.