ಯಕ್ಷಗಾನ (ಸಾಂದರ್ಭಿಕ ಚಿತ್ರ)
ಬ್ರಹ್ಮಾವರ: ಬೆಂಗಳೂರಿನ ಯಕ್ಷದೇಗುಲ ತಂಡವು ಸಿಂಗಪುರದ ಕನ್ನಡ ಸಂಘದ ವತಿಯಿಂದ ನಡೆಯುವ ಕಾರ್ಯಕ್ರಮದಲ್ಲಿ ಯಕ್ಷಗಾನ ಪ್ರದರ್ಶನ ನೀಡಲಿದೆ.
ಇದೇ 30ರಂದು ಸಿಂಗಪುರ ದೇಶದ ಆರೆಂಜ್ ಗ್ರೂವ್ ರೋಡ್, ಆರ್‌ಇಎಲ್‌ಸಿ ಇಂಟರ್‌ನ್ಯಾಷನಲ್ ಹೋಟೆಲ್ ಸಭಾಂಗಣದಲ್ಲಿ ಸಂಜೆ 6ಕ್ಕೆ ‘ರತ್ನಾವತಿ ಕಲ್ಯಾಣ’ ಯಕ್ಷಗಾನ ಪ್ರದರ್ಶನ ನೀಡಲಿದೆ. 31ರಂದು ಬೆಳಿಗ್ಗೆ 9ರಿಂದ ಯಕ್ಷಗಾನದ ವಾಚಿಕ, ಆಂಗಿಕ, ಸಾತ್ವಿಕ, ಆಹಾರ್ಯಗಳನ್ನೊಳಗೊಂಡ ಯಕ್ಷಾಂತರಂಗವನ್ನು ಹೊಸ ತಲೆಮಾರಿನವರಿಗೆ ಪರಿಚಯಿಸುವ ಯಕ್ಷಗಾನ ಪ್ರಾತ್ಯಕ್ಷಿಕೆ ಎಸ್.ಪಿ. ಜೈನ್ ಶಾಲಾ ಪ್ರಾಂಗಣದಲ್ಲಿ ನಡೆಯಲಿದೆ.
ಕಲಾವಿದರಾಗಿ ಕೋಟ ಸುದರ್ಶನ ಉರಾಳ, ಪ್ರಿಯಾಂಕ ಕೆ. ಮೋಹನ್, ಲಂಬೋದರ ಹೆಗಡೆ, ಸುಜಯೀಂದ್ರ ಹಂದೆ, ಉದಯ ಹೆಗಡೆ ಕಡಬಾಳ, ದಿನೇಶ ಕನ್ನಾರು, ವಿಶ್ವನಾಥ ಉರಾಳ, ಸುದೀಪ ಉರಾಳ, ಶ್ರೀರಾಮ ಹೆಬ್ಬಾರ್, ಶ್ರೀವತ್ಸ ಅಡಿಗ, ಶ್ರೀವಿದ್ಯಾ ಭಾಗವಹಿಸುವರು ಎಂದು ಸಿಂಗಪುರದ ಕನ್ನಡ ಸಂಘದ ಅಧ್ಯಕ್ಷ ವೆಂಕಟೇಶ ಗೆದ್ದೆಮನೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.