ADVERTISEMENT

ಸಂಸ್ಕೃತಿ ಉಳಿಸಿ, ಸಂಸ್ಕಾರ ಬೆಳೆಸುವ ಕಲೆ ಯಕ್ಷಗಾನ: ವಾಸುದೇವ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 8 ಮೇ 2025, 11:03 IST
Last Updated 8 ಮೇ 2025, 11:03 IST
ಗುಂಡ್ಮಿ ಸದಾನಂದ ರಂಗಮಂಟಪದಲ್ಲಿ ಹಂಗಾರಕಟ್ಟೆ ಐರೋಡಿ ಯಕ್ಷಗಾನ ಕಲಾಕೇಂದ್ರ 20 ದಿನಗಳ ಕಾಲ ನಡೆಸಿದ ನಲಿಕುಣಿ ಯಕ್ಷಗಾನ ತರಬೇತಿ ಶಿಬಿರದ ಸಮಾರೋಪದಲ್ಲಿ ಬಾಳ್ಕುದ್ರು ಮಠದ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ಆಶೀರ್ವಚನ ನೀಡಿದರು
ಗುಂಡ್ಮಿ ಸದಾನಂದ ರಂಗಮಂಟಪದಲ್ಲಿ ಹಂಗಾರಕಟ್ಟೆ ಐರೋಡಿ ಯಕ್ಷಗಾನ ಕಲಾಕೇಂದ್ರ 20 ದಿನಗಳ ಕಾಲ ನಡೆಸಿದ ನಲಿಕುಣಿ ಯಕ್ಷಗಾನ ತರಬೇತಿ ಶಿಬಿರದ ಸಮಾರೋಪದಲ್ಲಿ ಬಾಳ್ಕುದ್ರು ಮಠದ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ಆಶೀರ್ವಚನ ನೀಡಿದರು   

ಬ್ರಹ್ಮಾವರ: ‘ಯಕ್ಷಗಾನ ಒಂದು ಆರಾಧನಾ ಕಲೆ. ಸಂಸ್ಕೃತಿ ಉಳಿಸಿ, ಸಂಸ್ಕಾರ ಬೆಳೆಸುವುದೇ ಇದರ ಮುಖ್ಯ ಆಶಯ’ ಎಂದು ಎಂದು ಬಾಳ್ಕುದ್ರು ಮಠದ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ಹೇಳಿದರು.

ಗುಂಡ್ಮಿ ಸದಾನಂದ ರಂಗಮಂಟಪದಲ್ಲಿ ಹಂಗಾರಕಟ್ಟೆ ಐರೋಡಿ ಯಕ್ಷಗಾನ ಕಲಾಕೇಂದ್ರ 20 ದಿನಗಳ ಕಾಲ ನಡೆಸಿದ ‘ನಲಿ–ಕುಣಿ ಯಕ್ಷಗಾನ’ ತರಬೇತಿ ಶಿಬಿರದ ಸಮಾರೋಪದಲ್ಲಿ ಅವರು ಆಶೀರ್ವಚನ ನೀಡಿದರು.

ದೇಹದಂಡನೆಯ ಕಲೆ ಭಗವಂತನಿಗೆ ಪ್ರಿಯವಾದದ್ದು. ಕಲೆಯಿಂದ ಸಂಸ್ಕೃತಿಯ ಉದ್ದಾರವಾಗಬೇಕು. ಮನಸ್ಸು ವಿಕಾಸವಾಗಬೇಕು. ಆದರೂ ಯಕ್ಷಗಾನ ಇತ್ತೀಚಿಗೆ ಭಕ್ತಿ ಹೀನವಾದ, ಲೌಕಿಕ ಪ್ರಸಂಗಗಳ, ಶಾಸ್ತ್ರ ವಿರುದ್ಧ ಸಂಭಾಷಣೆಗಳ, ಮನೋವಿಕಾರತೆ ಹೊಂದಿರುವುದನ್ನು ಗಮನಿಸುತ್ತಿದ್ದೇವೆ. ಹಾಗಾಗಬಾರದು, ಯಾವುದು ಧರ್ಮ ಬಾಹಿರವಾಗಬಾರದು ಎಂದು ಅಭಿಪ್ರಾಯಪಟ್ಟರು.

ADVERTISEMENT

ಕಲಾಕೇಂದ್ರದ ಅಧ್ಯಕ್ಷ ಆನಂದ.ಸಿ.ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಲೆಕ್ಕಪತ್ರ ಪರಿಶೋಧಕ ಜತೀಂದ್ರ ಮರವಂತೆ ಇದ್ದರು.

ಇದೇ ಸಂದರ್ಭ ಶಿಬಿರದ ಪ್ರಾಚಾರ್ಯರು ಮತ್ತು ಶಿಕ್ಷಕರನ್ನು ಸ್ವಾಮೀಜಿ ಗೌರವಿಸಿದರು. ಆರ್ಥಿಕವಾಗಿ ಸಹಕರಿಸಿದ ಮಹನೀಯರನ್ನು ಸನ್ಮಾನಿಸಲಾಯಿತು. ಶಾಸಕ ಕಿರಣ್ ಕುಮಾರ್ ಕೊಡ್ಲಿ ಅವರ ಉಪಸ್ಥಿತಿಯಲ್ಲಿ ಶಿಬಿರಾರ್ಥಿಗಳ ಯಕ್ಷಗಾನ ಪ್ರದರ್ಶನವಾಯಿತು. ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ ಸ್ವಾಗತಿಸಿದರು. ಪತ್ರಕರ್ತ ಚಿತ್ತೂರು ಪ್ರಭಾಕರ ಆಚಾರ್ಯ ನಿರೂಪಿಸಿದರು. ಸೀತಾರಾಮ ಸೋಮಯಾಜಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.