ADVERTISEMENT

ಚಾಣಕ್ಯ ಚಿಲ್ಡ್ರನ್ಸ್ ಅವಾರ್ಡ್: ಯಶಸ್ ಪ್ರತಿಭೆಗೆ ದೊರೆತ ಗೌರವ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2021, 4:00 IST
Last Updated 13 ನವೆಂಬರ್ 2021, 4:00 IST
ಯಶಸ್
ಯಶಸ್   

ಹೆಬ್ರಿ: ಇಲ್ಲಿನ ಚಾಣಕ್ಯ ಎಜ್ಯುಕೇಷನ್ ಮತ್ತು ಕಲ್ಚರಲ್ ಅಕಾಡೆಮಿಯು ಮಕ್ಕಳ ದಿನಾಚರಣೆ ಅಂಗವಾಗಿ ಪ್ರತಿಭಾವಂತ ಮಕ್ಕಳಿಗೆ ನೀಡುವ ಚಾಣಕ್ಯ ಚಿಲ್ಡ್ರನ್ಸ್ ಅವಾರ್ಡ್‌ಗೆ ಬಾಲಪ್ರತಿಭೆ ಕೊಳಲುವಾದಕ, ಗಾಯಕ ಮಾಸ್ಟರ್ ಯಶಸ್ ಪಿ.ಸುವರ್ಣ ಕಟಪಾಡಿ ಆಯ್ಕೆಯಾಗಿದ್ದಾರೆ.

ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ ಪ್ರಕಾಶ ಸುವರ್ಣ ಕಟಪಾಡಿ ಹಾಗೂ ಪ್ರೀತಿ ಸುವರ್ಣ ದಂಪತಿ ಪುತ್ರ ಯಶಸ್, ಕಿನ್ನಿಮೂಲ್ಕಿ ಸಂತ ಮೇರಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ 8ನೇ ತರಗತಿ ಕಲಿಯುತ್ತಿದ್ದಾನೆ.

ಜಾನಪದ, ಭಕ್ತಿಗೀತೆ, ಭಾವಗೀತೆ, ಚಿತ್ರಗೀತೆಗಳನ್ನು ಕಲಿತು, ಹಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಜನಮನ ಗೆದ್ದಿದ್ದಾನೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.