ADVERTISEMENT

ಕನ್ನಡದ ಸೇವೆ ಮಾಡಿದ ಮರಾಠಿಗ

ಪ್ರಜಾವಾಣಿ ವಿಶೇಷ
Published 11 ಫೆಬ್ರುವರಿ 2012, 5:40 IST
Last Updated 11 ಫೆಬ್ರುವರಿ 2012, 5:40 IST

ಕಾರವಾರ: ಇದು ಮರಾಠಿಗನೊಬ್ಬ ಕನ್ನಡದ ಸೇವೆ ಮಾಡಿದ ಕಥೆ. ಮರಾಠಿ ಭಾಷೆಯಲ್ಲಿಶಿಕ್ಷಣ ಪಡೆದು ಮಹಾ ರಾಷ್ಟ್ರದಲ್ಲಿ ಸರ್ಕಾರಿ ಸೇವೆಯಲ್ಲಿದ್ದು ನಿವೃತ್ತಿಯ ನಂತರ ತವರೂರಿಗೆ ಬಂದು ಕನ್ನಡ ಶಾಲೆಯೊಂದು ಮುಚ್ಚಿಹೋಗ ಲಿದೆ ಎನ್ನುವ ಸಂದರ್ಭದಲ್ಲಿ ಸ್ವಯಂ ಪ್ರೇರಿತರಾಗಿ ಬಂದು ಶಾಲೆಗೆ ಜಾಗ ದಾನ ಮಾಡಿರುವ ನಾರಾಯಣ ಕದಂ ಎಲ್ಲ ಭಾಷಿಕರಿಗೂ ಮಾದರಿ ಯಾಗಿದ್ದಾರೆ. 

 ತಾಲ್ಲೂಕಿನ ಸದಾಶಿವಗಡದ ರೈತ ಕೃಷ್ಣ ಕದಂ ದಂಪತಿಗೆ ಜನಿಸಿದ ಮಗು ವಿಗೆ ಕೈಗಳಿರಲಿಲ್ಲ. ಉಳಿದ ಅಂಗಗಳೆಲ್ಲ ಸರಿ ಇದ್ದವು. ಈ ಮಗುವಿನ ಸ್ಥಿತಿನೋಡಿ ಸಹಜವಾಗೇ ಪಾಲಕರಿಗೆ ದುಃಖವಾ ಯಿತು. ಈ ದುಃಖವನ್ನು ಅದುಮಿ ಕೊಂಡೇ ಪಾಲಕರು ಮಗನ ಸೇವೆ ಮಾಡಿದರು. ಮಗ ಪಾಂಡುರಂಗನನ್ನು ಶಾಲೆಗೆ ಸೇರಿಸಿದರು.

ಅಂದು, ಅಂದರೆ 1894ರ ಸುಮಾ ರಿಗೆ ದೇವವಾಡ ಮರಾಠಿ ಶಾಲೆಯಲ್ಲಿ ಶಿಕ್ಷಕರಾಗಿದ್ದ ಶ್ಯಾಮ ಮಾಸ್ತರರು ಪಾಂಡುರಂಗನನ್ನು ಪ್ರೀತಿಯಿಂದಲೇ ಶಾಲೆಗೆ ಬರ ಮಾಡಿಕೊಂಡರು. ಕೈಗಳಿಲ್ಲದ ಬಾಲಕನ ಕಾಲಿನ ಎರಡು ಬೆರಳುಗಳ ಮಧ್ಯದಲ್ಲಿ ಕಡ್ಡಿಯನ್ನಿಟ್ಟು ಬರೆಯಲು ತಿಳಿಸಿದರು. ಆತ ಬರೆಯಲು ಕಲಿತಿರುವುದನ್ನು ನೋಡಿ ಆನಂದ ಪಟ್ಟರು. ಕೈಗಳಿಲ್ಲದ್ದಿದ್ದರೂ ಫುಟ್‌ಬಾಲ್ ಆಟದಲ್ಲೂ ಈತನದ್ದು ಎತ್ತಿದ ಕೈ. ಹೀಗೆ ಆರನೇ ತರಗತಿ ಕಲಿತ ಕದಂ ಶಿಕ್ಷಣವನ್ನು ಅಲ್ಲಿಗೇ ನಿಲ್ಲಿಸಿದರು.

ಕೈಯಿಲ್ಲ ಎನ್ನುವ ಕಾರಣಕ್ಕೆ ಅವರು ಪಾಂಡುರಂಗ ಸುಮ್ಮನಾಗಲಿಲ್ಲ. 1912ರ ಜನವರಿಯಲ್ಲಿ ದೇವವಾಡ ದಲ್ಲಿ ಮರಾಠಿ ಗಂಡು ಮಕ್ಕಳ ಶಾಲೆ ಯನ್ನು ತೆರೆದರು. ಕಾಲು ಬೆರಳುಗಳಿಂದ ಬೋರ್ಡ್ ಮೇಲೆ ಬರೆಯುತ್ತ ಮಕ್ಕಳಿಗೆ ಪಾಠ ಮಾಡುತ್ತಿದ್ದರು. ಸುಮಾರು 10ರಿಂದ 15 ವಿದ್ಯಾರ್ಥಿ ಗಳು ಆಗ ಶಾಲೆಗೆ ಬರುತ್ತಿದ್ದರು. ಈ ವಿದ್ಯಾರ್ಥಿಗಳ ಪೈಕಿ ನಾರಾಯಣ ಕದಂ ಒಬ್ಬರಾಗಿದ್ದರು.

ಪಾಂಡುರಂಗ ಕದಂ ಅವರು ಸ್ಥಾಪಿಸಿದ ಶಾಲೆ 1964ರಲ್ಲಿ ಸರ್ಕಾರಿ ಮರಾಠಿ ಶಾಲೆಯಾಯಿತು. ದೇವ ವಾಡದ ಜೈನ ಪುರುಷ ದೇವಸ್ಥಾನದಲ್ಲಿ ತರಗತಿ ನಡೆಯುತ್ತಿತ್ತು. ಮುಂದೆ 1996ರಲ್ಲಿ ಈ ಶಾಲೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಾಗಿ ಪರಿವರ್ತನೆ ಗೊಂಡಿತು. ದೇವಸ್ಥಾನದಲ್ಲಿ ನಡೆಯುತ್ತಿ ರುವ ಈ ಶಾಲೆಗೆ ಜಾಗ ಮತ್ತು ಕಟ್ಟಡದ ಸಮಸ್ಯೆ ಎದುರಾಯಿತು. ಈ ಸಮಸ್ಯೆಯಿಂದ ಶಾಲೆ ಮುಚ್ಚುವ ಪರಿಸ್ಥಿತಿ ಎದುರಾಗಿತ್ತು.

ಜಾಗವಿಲ್ಲದೆ ಶಾಲೆ ಮುಚ್ಚುವ ಸ್ಥಿತಿಯಲ್ಲಿದೆ ಎನ್ನುವ ವಿಷಯ ಮುಂಬೈನಲ್ಲಿ ಸರ್ಕಾರಿ ಸೇವೆಯಲ್ಲಿದ್ದು ನಿವೃತ್ತಿಯ ನಂತರ ಊರಿಗೆ ಮರಳಿದ ನಾರಾಯಣ ಕದಂ ಅವರಿಗೆ ಗಮನಕ್ಕೆ ಬಂತು. ತಕ್ಷಣವೇ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಕದಂ ಅವರು ತಮ್ಮ ತಂದೇ ಶಿವ ಕದಂ ಅವರ ಸ್ಮರಣಾರ್ಥ ದೇವವಾಡದಲ್ಲಿ 4ಗುಂಟೆ ಜಾಗವನ್ನು ದಾನ ಮಾಡಿದರು. ಈ ಜಾಗದಲ್ಲಿ ಈಗ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ತಲೆಎತ್ತಿ ನಿಂತಿದೆ. 1ರಿಂದ 5ನೇ ತರಗತಿ ವರೆಗೆ ಒಟ್ಟು 32 ವಿದ್ಯಾರ್ಥಿಗಳು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿ ಯಾಗುತ್ತಿದೆ. ಇತ್ತೀಚೆಗಷ್ಟೇ ಶಾಲೆ ಶತಮಾನೋತ್ಸವ ಸಂಭ್ರಮವನ್ನು ಆಚರಿಸಿಕೊಂಡಿತು.

`ಭಾಷೆ ಯಾವುದೇ ಇರಲಿ ಅದು ಮುಖ್ಯವಲ್ಲ ಮಕ್ಕಳಿಗೆ ಶಿಕ್ಷಣ ನೀಡಬೇಕು ಎನ್ನುವುದೇ ನನ್ನ ಉದ್ದೇಶ. ದೂರದ ಊರುಗಳಿಂದ ಶಿಕ್ಷಕರು ಶಾಲೆಗೆ ಬರಲು ತೊಂದರೆಯಾದರೆ ಅವರಿಗೆ ಶಾಲೆಯ ಪಕ್ಕದಲ್ಲೇ ರೂಮ್‌ಗಳನ್ನು ಕಟ್ಟಿಸಿಕೊಡುತ್ತೇನೆ~ ಎನ್ನುತ್ತಾರೆ ನಾರಾಯಣ ಕದಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.