ADVERTISEMENT

ಕೇಂದ್ರದ ನೀತಿಯಿಂದ ತೊಂದರೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 8:30 IST
Last Updated 7 ಜನವರಿ 2012, 8:30 IST

ಕುಮಟಾ:  ಕೇಂದ್ರ ಸರಕಾರ ಜಾರಿಗೊಳಿ ಸುತ್ತಿರುವ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಶಿಕ್ಷಕರ ಎದುರು ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಬಸವ ರಾಜ ಹೊರಟ್ಟಿ ತಿಳಿಸಿದರು.

ಕುಮಟಾದಲ್ಲಿ ಶುಕ್ರವಾರ ಮಾಧ್ಯಮಿಕ ಶಾಲಾ ಶಿಕ್ಷಕರ ನೌಕರರ ಸಂಘ ಏರ್ಪಡಿಸಿದ್ದ ಶೈಕ್ಷಣಿಕ ಸಮ್ಮೇಳನ ಉದ್ಘಾಟಿಸಿದ ಅವರು ಮಾತನಾಡಿದರು.

ಹೊಸ ಶಿಕ್ಷಣ ನೀತಿಯಿಂದಾಗಿ ತರಗತಿಗಳಲ್ಲಿ  ಪಾಠ ಕಲಿಸುವ ಶಿಕ್ಷಕರಿಗೆ ವಿಶೇಷ ತರಬೇತಿಯ ಅಗತ್ಯವಿದೆ. ಶೇ. 90 ಮಕ್ಕಳಿಗೆ ಪಾಠ ಗಳು ಅರ್ಥವಾಗದಿರುವ ಸಾಧ್ಯತೆ ಹೆಚ್ಚು. ಬರುವ ಶೈಕ್ಷಣಿಕ ವರ್ಷ ದಿಂದಲೇ ಹೊಸ ನೀತಿ ಜಾರಿಯಾಗುವು ದರಿಂದ ಅನುದಾನಿತ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ಹೆಚ್ಚುವರಿ ತರಗತಿ ಗಳಿಗೆ ಏನು ವ್ಯವಸ್ಥೆ ಮಾಡಿಕೊಳ್ಳು ತ್ತಾರೆ.

ಅಗತ್ಯವಿರುವ ಹೆಚ್ಚುವರಿ ಶಿಕ್ಷಕರಿಗೆ ಹೇಗೆ ಸಂಬಳ ನೀಡುತ್ತಾರೆ ಎನ್ನವುದು ನಿಜಕ್ಕೂ ಸವಾಲು. ಈ ನೀತಿ ಜಾರಿ ಮಾಡದಿದ್ದರೆ ಕೇಂದ್ರ ಸರಕಾರ ರಾಜ್ಯಕ್ಕೆ ನೀಡುವ ಅನುದಾನ  ಸ್ಥಗಿತ ಗೊಳಿಸುವ ಸಾಧ್ಯತೆ ಇರುವುದರಿಂದ ರಾಜ್ಯ ಸರಕಾರಕ್ಕೂ ನೀತಿಯ ಅನುಷ್ಠಾನ ಅನಿವಾರ್ಯವಾಗಿದೆ. ಇವೆಲ್ಲವುಗಳ ಬಗ್ಗೆ ಕನಿಷ್ಠ ಮೂರು ವರ್ಷಗಳ ಹಿಂದೆಯೇ ತಯಾರಿ ಇದ್ದಿದ್ದರೆ ಇಷ್ಟೆಲ್ಲ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಈಗಲಾದರೂ ಇದರ  ಬಗ್ಗೆ ಚರ್ಚೆ ನಡೆದು ಸಮಸ್ಯೆಗೆ ಉತ್ತರ ಕಂಡು ಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ~ ಎಂದರು. ಕಾರ್ಯಕ್ರಮದಲ್ಲಿ ಶಾಸಕ ದಿನಕರ ಶೆಟ್ಟಿ ಭಾಗವಹಿಸಿ ಮಾತನಾಡಿದರು.

ಕ್ಷೇತ್ರ ಶಿಕ್ನಧಿಕಾರಿ ಸಿ.ಟಿ. ನಾಯ್ಕ, ಶಿಕ್ಷಕರ ಸಂಘದ ರಾಜ್ಯ ಸಮಿತಿ ಸದಸ್ಯ ಪ್ರಕಾಶ ನಾಯಕ, ಜಿಲ್ಲಾಧ್ಯಕ್ಷ ಪ್ರಭಾಕರ ಬಂಟ ಗಿಬ್ ಹೈಸ್ಕೂಲ್ ಆಡಲೀತ ಮಂಡಳಿ ಅಧ್ಯಕ್ಷ ಡಾ. ರತ್ನಾಕರ  ಶಾನಭಾಗ ಹಾಗೂ ಶಿಕ್ಷಣಾಧಿಕಾರಿ ಮಂಗಲಾ ನಾಯಕ ಅನುದಾನಿತ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಎನ್. ನಾಯ್ಕ, ಕಾರ್ಯದರ್ಶಿ ಈಶ್ವರ ಹೆಬ್ಬಾರ ಇದ್ದರು.

ಮುಖ್ಯಾಧ್ಯಾಪಕ ಎಂ.ರಮೇಶ ಉಪಾಧ್ಯಯ ಸ್ವಾಗತಿಸಿದರು. ಕಾರ್ಯ ದರ್ಶಿ ಬಿ.ಎಸ್.ಬಿ. ಗೌಡರ್ ವಂದಿಸಿ ದರು. ಉದಯ ನಾಯ್ಕ ನಿರೂಪಿ ಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.