ಕಾರವಾರ: ಮರಾಠಿ- ಕೊಂಕಣಿ ಭಾಷಿಕರೇ ಹೆಚ್ಚಿನ ಸಂಖ್ಯೆಯಲ್ಲಿ ನೆಲೆ ಸಿದ್ದ ಕಾರವಾರ-ಗೋವಾ ಗಡಿಯಲ್ಲಿ ರುವ ಸದಾಶಿವಗಡ, ಮೂಡಗೇರಿ, ಅಂಗಡಿ ಸೇರಿದಂತೆ ಅನೇಕ ಗ್ರಾಮಗಳ ಎಲ್ಲ ಮಕ್ಕಳು ಕನ್ನಡದಲ್ಲೇ ಶಿಕ್ಷಣ ಪಡೆದು ಈ ಪ್ರದೇಶವನ್ನು ಕನ್ನಡ ಮಯಗೊಳಿಸುತ್ತಿದ್ದಾರೆ. ಸರ್ವಶಿಕ್ಷಣ ಅಭಿಯಾನದಿಂದಾಗಿ ಎಲ್ಲ ರೀತಿಯ ಶೈಕ್ಷಣಿಕ ಹಾಗೂ ಭೌತಿಕ ಅಗತ್ಯತೆ ಗಳು ಮಕ್ಕಳಿಗೆ ದೊರಕುತ್ತಿದೆ.
ಮಾಧ್ಯಮ ದಾಖಲೀಕರಣ ನಿಮಿತ್ತ ಸದಾಶಿವಗಡ, ಅರ್ಜುನ ಕೋಟಾ, ಮೂಡಗೇರಿ, ನಾಗಪೊಂಡ ಶಾಲೆಗಳಿಗೆ ವಾರ್ತಾ ಇಲಾಖೆಯ ಅಧಿ ಕಾರಿಗಳು ಭೇಟಿ ನೀಡಿದ ಸಂದರ್ಭ ದಲ್ಲಿ ಮಾತೃಭಾಷೆ ಕೊಂಕಣಿಯಾ ಗಿದ್ದರೂ ಕನ್ನಡದಲ್ಲಿ ಅಧ್ಯಯನ ಮಾಡಲು ಮಕ್ಕಳು ಆಸಕ್ತಿ ತಳೆದಿ ರುವುದು ಕಂಡುಬಂದಿದೆ.
ಕೂಲಿಕಾರ್ಮಿಕರು ಹೆಚ್ಚಿರುವ ಅರ್ಜುನಕೋಟಾ ಪ್ರದೇಶದ ಶಾಲೆಯ ಮಕ್ಕಳ ಭವಿಷ್ಯಕ್ಕಾಗಿ ಮುಖ್ಯಾಧ್ಯಾಪಕಿ ಕಾಮಾಕ್ಷಿ ನಾಯ್ಕ ಹಾಗೂ ಶಿಕ್ಷಕಿ ರೇಖಾ ನಾಯ್ಕ ಪ್ರಾಮಾಣಿಕ ಸೇವೆ ನೀಡುತ್ತಿದ್ದಾರೆ. 40 ವರ್ಷಗಳ ಹಿಂದೆ ತಮಿಳುನಾಡಿ ನಿಂದ ವಲಸೆ ಬಂದಿರುವ ಬಡ ಕೂಲಿ ಕಾರ್ಮಿಕರ ಮಕ್ಕಳು ಇಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ.
106 ವರ್ಷಗಳನ್ನು ಬಾಡಿಗೆ ಕಟ್ಟಡದಲ್ಲೇ ಪೂರೈಸಿರುವ ನಾಗ ಪೊಂಡ ಶಾಲೆಯ ಶೈಕ್ಷಣಿಕ ಅಭಿ ವೃದ್ಧಿಗೆ ಶಿಕ್ಷಕಿಯರಿಬ್ಬರ ಪೈಪೋಟಿ ಎಲ್ಲರನ್ನು ಆಶ್ಚರ್ಯಗೊಳಿಸುತ್ತದೆ. 1ರಿಂದ 5ರ ವರೆಗೆ 41 ಮಕ್ಕಳು ಶಾಲೆಯಲ್ಲಿದ್ದು ಶೈಕ್ಷಣಿಕವಾಗಿ ಮಕ್ಕಳು ಉತ್ತಮ ಪ್ರಗತಿ ಸಾಧಿಸಿದ್ದಾರೆ.
ಈ ಶಾಲೆಯ ಸುತ್ತ ಮುತ್ತ ಕೂಗಳತೆಯಲ್ಲೇ ಅನೇಕ ದಾನಿಗಳು, ಜನಪ್ರತಿನಿಧಿಗಳು ಸಮಾಜ ಸೇವಕರು ವಾಸವಾಗಿದ್ದರೂ ಈ ಶಾಲೆಗೆ ಭೂಮಿ ದಾನ ಮಾಡಲು ಅಥವಾ ಜಾಗೆಯನ್ನು ಗುರುತಿಸುಲ್ಲಿ ಯಾರೂ ಕಿಂಚಿತ್ತೂ ಗಮನಹರಿ ಸುತ್ತಿಲ್ಲ.
ಕೊಂಕಣಿ ಮರಾಠಿಮಯವಾಗಿ ರುವ ಮುಡಗೇರಿ ಪ್ರದೇಶದಲ್ಲಿರುವ ಹಿರಿಯ ಕನ್ನಡ ಪ್ರಾಥಮಿಕ ಶಾಲೆಗೆ ಎಲ್ಲ ರೀತಿಯ ಸೌಲಭ್ಯಗಳಿದ್ದು ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆ ಯುತ್ತಿದ್ದಾರೆ. ಇಲ್ಲಿಯ ಶಿಕ್ಷಕರು ಎಸ್‌ಡಿಎಂಸಿ ಸದಸ್ಯರು ಸಮುದಾಯ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯೆ ಆರತಿ ಬಾನಾವಳಿಕರ ಶಾಲೆಯ ಬೆಳವಣಿಗೆಗೆ ವಿಶೇಷ ಗಮನ ಹರಿಸುತ್ತಿದ್ದಾರೆ. ಶೈಕ್ಷಣಿಕ ಗುಣಮಟ್ಟ ಹಾಗೂ ಮಕ್ಕಳ ಕಲಿಕಾ ಸಾಮರ್ಥ್ಯ ಉತ್ತಮವಾಗಿದೆ. ಪಠ್ಯೇತರ ಚಟು ವಟಿಕೆಗಳಲ್ಲಿ ಸಮುದಾಯ ಕಾರ್ಯ ಕ್ರಮಗಳಲ್ಲಿ ಎಲ್ಲರ ಸಹಭಾಗಿತ್ವ ಎದ್ದು ಕಾಣುತ್ತಿರುವುದು ವಿಶೇಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.