ADVERTISEMENT

ಗಾಯಗೊಂಡಿದ್ದ ಚಿರತೆ ಬನ್ನೇರುಘಟ್ಟಕ್ಕೆ ರವಾನೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2017, 6:44 IST
Last Updated 10 ಅಕ್ಟೋಬರ್ 2017, 6:44 IST
ಸಿದ್ದಾಪುರ ತಾಲ್ಲೂಕಿನ ಮುಠ್ಠಳ್ಳಿ ಗ್ರಾಮದ ಓಣಿತೋಟದ ಸಮೀಪ ಕಾಡಿನಲ್ಲಿ ಕಾಣಿಸಿಕೊಂಡಿದ್ದ ಚಿರತೆಯನ್ನು ಹಿಡಿಯುವ ಕಾರ್ಯಾಚರಣೆ ಸೋಮವಾರ ನಡೆಯಿತು
ಸಿದ್ದಾಪುರ ತಾಲ್ಲೂಕಿನ ಮುಠ್ಠಳ್ಳಿ ಗ್ರಾಮದ ಓಣಿತೋಟದ ಸಮೀಪ ಕಾಡಿನಲ್ಲಿ ಕಾಣಿಸಿಕೊಂಡಿದ್ದ ಚಿರತೆಯನ್ನು ಹಿಡಿಯುವ ಕಾರ್ಯಾಚರಣೆ ಸೋಮವಾರ ನಡೆಯಿತು   

ಸಿದ್ದಾಪುರ: ತಾಲ್ಲೂಕಿನ ಹಾರ್ಸಿಕಟ್ಟಾ ಗ್ರಾಮ ಪಂಚಾಯ್ತಿಯ ಮುಠ್ಠಳ್ಳಿ ಗ್ರಾಮದ ಓಣಿ ತೋಟ ಸಮೀಪದ ಕಾಡಿನ ಪೊದೆಯಲ್ಲಿ ಭಾನುವಾರ ಕಾಣಿಸಿಕೊಂಡಿದ್ದ ಚಿರತೆಯನ್ನು ಸೋಮವಾರ ಹಿಡಿಯಲಾಯಿತು. ಅದನ್ನು ಬೆಂಗಳೂರಿನ ಬನ್ನೇರುಘಟಕ್ಕೆ ಕೊಂಡೊಯ್ಯಲಾಯಿತು.

ಶಿವಮೊಗ್ಗದ ತಜ್ಞ ಡಾ.ವಿನಯ ಎಸ್. ಅರಿವಳಿಕೆ ಚುಚ್ಚುಮದ್ದು ನೀಡುವ ಮೂಲಕ ಚಿರತೆ ಪ್ರಜ್ಞೆ ತಪ್ಪುವಂತೆ ಮಾಡಿದರು. ನಂತರ ಅದನ್ನು ಹಿಡಿದು, ಬೆಂಗಳೂರಿನ ಬನ್ನೇರುಘಟ್ಟದ ಸಫಾರಿಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಯಿತು. ಎಸಿಎಫ್ ಅಜೀಜ್ ಅಹ್ಮದ್,ಆರ್‌ಎಫ್ಒ ಲೋಕೇಶ ಪಾಟಣಕರ್, ಉಪ ಅರಣ್ಯಾಧಿಕಾರಿ ಅಶೋಕ ಪೂಜಾರ, ಸಿಬ್ಬಂದಿ ಹನುಮಂತ ಕಿಲಾರಿ ಇದ್ದರು.

ಸುಮಾರು 3–4 ವರ್ಷ ವಯಸ್ಸಿನ ಈ ಚಿರತೆಯ ಬೆನ್ನುಮೂಳೆಗೆ ಪೆಟ್ಟು ಬಿದ್ದಿದ್ದರಿಂದ ಅದರ ಹಿಂಭಾಗ ನಿಷ್ಕ್ರಿಯವಾಗಿತ್ತು. ಈ ಚಿರತೆ ಭಾನುವಾರ ಕಾಡಿನಲ್ಲಿ ಪೊದೆಯೊಂದರಲ್ಲಿ ಕುಳಿತು ಕೂಗುತ್ತಿದ್ದು. ಇದನ್ನು ನೋಡಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

ADVERTISEMENT

‘ಈ ಚಿರತೆ ಹೋರಾಟದಲ್ಲಿ ಅಥವಾ ಜಿಗಿಯುವಾಗ ಗಾಯಗೊಂಡಿರಬಹುದು. ಅದಕ್ಕೆ ಲಕ್ವ ಹೊಡೆದಿರುವ ಸಾಧ್ಯತೆಯೂ ಇದೆ. ಆದ್ದರಿಂದ ಚಿಕಿತ್ಸೆಗಾಗಿ ಬನ್ನೇರುಘಟ್ಟಕ್ಕೆ ಒಯ್ಯಲಾಗುತ್ತದೆ’ ಎಂದು ಡಾ.ವಿನಯ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.