ADVERTISEMENT

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನಿರಾಶೆ

ನೌಕಾದಳ ನೇಮಕಾತಿ ರ್‍್ಯಾಲಿ ಇಂದು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2014, 8:51 IST
Last Updated 13 ಮಾರ್ಚ್ 2014, 8:51 IST

ಕಾರವಾರ: ರಾಜ್ಯದಾದ್ಯಂತ ಬುಧವಾರದಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭಗಾಗಿದ್ದು, ಇದರ ನಡುವೆಯೇ ಗುರುವಾರ (ಮಾರ್ಚ್‌ 13) ಅರ್ಗಾದಲ್ಲಿ ನೌಕಾದಳ ಭರ್ತಿ ರ್‍್ಯಾಲಿ ಆಯೋಜಿಸಿರು ವುದರಿಂದ ವಿದ್ಯಾರ್ಥಿಗಳಲ್ಲಿ ನಿರಾಶೆ ಮೂಡಿಸಿದೆ.

ಇಲ್ಲಿನ ಅರ್ಗಾದ ಸೀ ಬರ್ಡ್‌ ನೌಕಾನೆಲೆಯ ಮುಖ್ಯ ದ್ವಾರದಲ್ಲಿ 17 ರಿಂದ 21 ವರ್ಷದ ಯುವಕ ರಿಗಾಗಿ ಗುರುವಾರ (ಇಂದು) ನೇಮಕಾತಿ ಭರ್ತಿ ರ್‍್ಯಾಲಿ ಆಯೋಜಿಸಲಾಗಿದೆ. ಆದರೆ, ಇದೇ ದಿನ ದ್ವಿತೀಯ ಪಿಯುಸಿ ಎಲೆಕ್ಟ್ರಾನಿಕ್‌ ಮತ್ತು ಜೀವಶಾಸ್ತ್ರ ಪರೀಕ್ಷೆ ನಡೆಯುತ್ತಿದೆ. ಇದರಿಂದಾಗಿ ನೌಕಾದಳ ಸೇರಬೇಕು ಎನ್ನುವ ಆಸೆ ಹೊಂದಿದ್ದ ವಿದ್ಯಾರ್ಥಿಗಳನ್ನು ಚಿಂತೆಗೀಡುಮಾಡಿದೆ.
ದ್ವಿತೀಯ ಪಿಯುಸಿ ಪರೀಕ್ಷೆ ದಿನಾಂಕ ತಿಂಗಳ ಹಿಂದೆಯೇ ಘೋಷಣೆಯಾಗಿತ್ತು. ಆದರೂ, ನೌಕಾ ದಳ ನೇಮಕಾತಿ ರ್‍ಯಾಲಿ ಪರೀಕ್ಷೆ ದಿನವೇ ಆಯೋಜಿಸಿ ರುವುದು ಜನರಲ್ಲಿ ಅಸಮಾಧಾನ ಮೂಡಿಸಿದೆ.

‘ನೌಕಾದಳ ಸೇರುವ ಆದರೆ, ರ್‍ಯಾಲಿ ನಡೆಯುವ ದಿನವೇ ಪರೀಕ್ಷೆ ಇರುವುದರಿಂದ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದೇ ತಿಳಿಯುತ್ತಿಲ್ಲ. ಈ ರ್‍್ಯಾಲಿಯನ್ನು ತಪ್ಪಿಸಿಕೊಂಡರೆ ಮತ್ತೆ ನೇಮಕಾತಿ ಯಾವಾಗ ನಡೆಯುತ್ತದೆಯೋ ಗೊತ್ತಿಲ್ಲ. ಪರೀಕ್ಷೆ ಮುಗಿದ ನಂತರ ರ್‍ಯಾಲಿ ಆಯೋಜಿಸಿದ್ದರೆ ಉತ್ತಮ ವಾಗಿತ್ತು ಎಂದು ವಿದ್ಯಾರ್ಥಿ ರಾಘವೇಂದ್ರ ನಾಯ್ಕ ‘ಪ್ರಜಾವಾಣಿ’ಯೊಂದಿಗೆ ಬೇಸರ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.