ADVERTISEMENT

ನವಾಯತ್ ಭಾಷೆ ಉಳಿಸಿ: ಲಂಕಾ

​ಪ್ರಜಾವಾಣಿ ವಾರ್ತೆ
Published 12 ಜೂನ್ 2012, 8:35 IST
Last Updated 12 ಜೂನ್ 2012, 8:35 IST

ಭಟ್ಕಳ: `ನವಾಯತ್ ಭಾಷೆಯನ್ನು ಉಳಿಸಲು ನವಾಯತ್ ಸಮುದಾಯ ಶ್ರಮಿಸಬೇಕು~ ಎಂದು ನವಾಯತ್ ಮೆಹಫಿಲ್ ಸಂಸ್ಥೆಯ ಮಾಜಿ ಅಧ್ಯಕ್ಷ ಅಬ್ದುಲ್ಲಾ ಲಂಕಾ ಹೇಳಿದರು.

ಇಲ್ಲಿನ ತಂಜೀಮ್ ಸಭಾಭವನದಲ್ಲಿ ಇತ್ತೀಚೆಗೆ ಜರುಗಿದ ನವಾಯತ್ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

ನವಾಯತರು ಪರಸ್ಪರ ವ್ಯವಹರಿಸುವಾಗ ನವಾಯತ ಭಾಷೆಯನ್ನೇ ಬಳಸಬೇಕು. ನಮ್ಮ ಎಲ್ಲಾ ಸಭೆ ಸಮಾರಂಭಗಳು ನವಾಯತ ಭಾಷೆಯಲ್ಲೇ ಜರುಗಬೇಕು. ದೇಶವಿದೇಶಗಳಲ್ಲಿರುವ ಮುಸ್ಲಿಮ್ ಜಮಾತ್‌ನ ಸಭೆಯ ನಡಾವಳಿಗಳನ್ನು ನವಾಯತ್ ಭಾಷೆಯಲ್ಲೇ ದಾಖಲಿಸಬೇಕು ಎಂದರು.

ADVERTISEMENT

ನವಾಯತ್ ಸಾಹಿತಿ ಅಬ್ದುಲ್ಲಾ ರಫೀಖ್ ಮಾತನಾಡಿ, ನವಾಯತ್ ಭಾಷೆಯು ಜೀವಂತ ಭಾಷೆಯಾಗಿದ್ದು ಅದರ ಅಳಿವು ಸಾಧ್ಯವಿಲ್ಲ. ನವಾಯತ್ ಸಮುದಾಯ ಎಲ್ಲಿವರೆಗೆ ಜೀವಂತವಿರುತ್ತದೆಯೋ ಅಲ್ಲಿವರೆಗೆ ನವಾಯತ್ ಭಾಷೆಯೂ ಜೀವಂತವಾಗಿರುತ್ತದೆ ಎಂದರು.

ನವಾಯತ್ ಮೆಹಫಿಲ್ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ದಾಮುದಿ ಅಧ್ಯಕ್ಷತೆ ವಹಿಸಿದ್ದರು. ಮರ್ಕಝಿ ಖಲಿಫಾ ಜಮಾತ್‌ನ ಖ್ವಾಜಿ ಮೊಯಿನುದ್ದೀನ್ ಅಕ್ರಮಿ ಮದನಿ ನದ್ವಿ, ಅಬ್ದುಲ್ ರೆಹ್ಮಾನ್ ಬಾತಿನ್, ಮೌಲಾನಾ ಐಮನ್ ಫರ‌್ದೋಸಿ ಮಾತನಾಡಿದರು.

ವಲ್ಕಿ ಜಮಾತ್‌ನ ಪ್ರಧಾನ ಕಾರ್ಯದರ್ಶಿ ಮುಹಿದ್ದೀನ್ ದಾವಲ್ಜಿ, ನವಾಯಿತಿ ಕವಿ ಸೈಯದ್ ಸಮೀವುಲ್ಲಾ ಬರ್ಮಾವರ್ ಮುಂತಾದವರು ಉಪಸ್ಥಿತರಿದ್ದರು. ಮಹ್ಮದ್ ಮುಸ್ತಫಾ ತಾಬಿಷ್ ವರದಿ ವಾಚಿಸಿದರು. ಆತಿಕುರ್ ರೆಹಮಾನ್ ಶಾಬಂದ್ರಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.