ADVERTISEMENT

ಪಾಲಕರ ಜವಾಬ್ದಾರಿ ಅವಶ್ಯ

​ಪ್ರಜಾವಾಣಿ ವಾರ್ತೆ
Published 16 ಜನವರಿ 2012, 8:10 IST
Last Updated 16 ಜನವರಿ 2012, 8:10 IST

ಭಟ್ಕಳ: ಮಕ್ಕಳ ಭವಿಷ್ಯ, ಪ್ರಗತಿ, ವ್ಯಕ್ತಿತ್ವ ನಿರ್ಮಾಣದಲ್ಲಿ ಶಿಕ್ಷಕರ,ಪಾಲಕರ ಹೊಣೆಗಾರಿಗೆ ಹೆಚ್ಚಿನದಾಗಿರುತ್ತದೆ ಎಂದು ಸಾಹಿತಿ ಹಾಗೂ ಅಂಜುಮನ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ.ಝಮೀರುಲ್ಲಾ ಷರೀಫ್ ಅಭಿಪ್ರಾಯಪಟ್ಟರು.

ಮುರ್ಡೇಶ್ವರದಲ್ಲಿ ಇತ್ತೀಚೆಗೆ ನಡೆದ ಆರ್.ಎನ್.ಎಸ್.ವಿದ್ಯಾನಿಕೇತನದ ವಾರ್ಷಿಕೋತ್ಸವ  ಸಮಾರಂಭದ ಮುಖ್ಯ ಅತಿಥಿಗಳಾಗಿ ಅವರು ಮಾತ ನಾಡಿದರು.  ಮುಖ್ಯ ಅತಿಥಿ ರಘು ರಾಮ್ ಭಟ್, ಸಂಸ್ಥೆಯ ಪ್ರಗತಿಯನ್ನು ಶ್ಲಾಘಿಸಿ, ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.

ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹು ಮಾನ ವಿತರಿಸಲಾಯಿತು. ಜೊತೆಗೆ ರಾಜ್ಯಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿಯ ಕನ್ನಡ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿದ ಶಾಲೆಯ ವಿದ್ಯಾರ್ಥಿನಿ ಸೌಜನ್ಯ ಎಸ್.ಹೆಗಡೆಯವರನ್ನು ಪಾಲಕರಾದ ಮಹಾಲಕ್ಷ್ಮಿ ಮತ್ತು ಶಂಕರ ಹೆಗಡೆಯವರ ಜತೆಯಲ್ಲಿ ಸನ್ಮಾ ನಿಸಿ ಗೌರವಿಸಲಾಯಿತು.ಆರ್.ಎನ್. ಎಸ್.ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಎಂವಿ ಹೆಗಡೆ ಅಧ್ಯಕ್ಷತೆ ವಹಿಸಿ, ಸಂಸ್ಥೆಯ ಧ್ಯೇಯೋದ್ದೇಶಗಳ ಬಗ್ಗೆ ವಿವರಿಸಿದರು.ಮುಖ್ಯಾಧ್ಯಾಪಕ ಜಿ.ಕೆ.ಶೇಟ್ ಸ್ವಾಗತಿಸಿದರು.ಗೀತಾಕಿಣಿ ವಂದಿಸಿದರು. ನಂತರ ವಿದ್ಯಾರ್ಥಿಗಳಿಂದ ವಿವಿಧ ಮನರಂಜನಾ ಕಾರ್ಯಕ್ರಮ ನಡೆಯಿತು,

ಪ್ರಶಸ್ತಿ: ಇಲ್ಲಿನ ಮಾದರಿ ಗಂಡುಮಕ್ಕಳ ಶಾಲೆಗೆ ಸರ್ವಶಿಕ್ಷಣ ಅಭಿಯಾನದಡಿ ನೀಡಲಾಗುವ `ಜಿಲ್ಲಾಮಟ್ಟದ ಅತ್ಯುತ್ತಮ ಶಾಲೆ ಮತ್ತು ಶಾಲಾಭಿವೃದ್ದಿ ಸಮಿತಿ~ಪ್ರಶಸ್ತಿ ಪಡೆದುಕೊಂಡಿದೆ.

ಕ್ರಿಯಾಶೀಲ ಅಭಿವೃದ್ದಿ ಸಮಿತಿ ಮತ್ತು ಶಾಲೆಯ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಪ್ರಶಸ್ತಿ ಪಡೆದ ಶಾಲೆಗೆ ಕ್ಷೇತ್ರ ಶಿಕ್ಷಣಾ ಧಿಕಾರಿ ದೇವಿದಾಸ ಮೊಗೇರ್ ಭೇಟಿ ನೀಡಿ ಶುಭ ಹಾರೈಸಿ ಅಭಿನಂದಿಸಿದ ರಲ್ಲದೇ, ಶಾಲೆಯ ಶೈಕ್ಷಣಿಕ ಗುಣಮಟ್ಟ ಮತ್ತು  ಕ್ರಿಯಾಶೀಲತೆ ಇದೇ ರೀತಿ ಮುಂದುವರಿಯಲ್ಲಿ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.