ADVERTISEMENT

ಬನವಾಸಿ ಮಧುಕೇಶ್ವರನಿಗೆ 33 ಅಡಿ ರುದ್ರಾಕ್ಷಿ ಮಾಲೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2012, 9:10 IST
Last Updated 4 ಏಪ್ರಿಲ್ 2012, 9:10 IST

ಶಿರಸಿ: ತಾಲ್ಲೂಕಿನ ಪುಣ್ಯ ಕ್ಷೇತ್ರ ಬನವಾಸಿಯ ಮಧುಕೇಶ್ವರ ದೇವರಿಗೆ ಅನಿವಾಸಿ ಬನವಾಸಿ ಬಳಗ 33 ಅಡಿ ಉದ್ದದ ಬೃಹತ್ ಗಾತ್ರದ ರುದ್ರಾಕ್ಷಿ ಮಾಲೆಯನ್ನು ಅರ್ಪಿಸಿದೆ.

70 ಸಾವಿರ ರುದ್ರಾಕ್ಷಿ ಮಣಿ ಹೊಂದಿರುವ ಒಂದೂವರೆ ಕ್ವಿಂಟಾಲ್ ಭಾರದ ರುದ್ರಾಕ್ಷಿ ಮಾಲೆಯನ್ನು ಮೆರವಣಿಗೆಯಲ್ಲಿ ತಂದು ರಥೋತ್ಸವದ ದಿನ ಮಂಗಳವಾರ ದೇವರಿಗೆ ಅರ್ಪಿಸಲಾಯಿತು. 45 ಎಳೆಗಳಿರುವ ರುದ್ರಾಕ್ಷಿ ಮಾಲೆಯ ಅಂದಾಜು ಮೊತ್ತ ರೂ. 50,000 ದಷ್ಟಾಗಿದೆ. ಬನವಾಸಿ ಮೂಲದ ಅನೇಕರು ಹೊರ ಊರುಗಳಲ್ಲಿ ವೃತ್ತಿ ಜೀವನ ನಡೆಸುತ್ತಿದ್ದು, ಅಂಥವರು ಮತ್ತು ಊರಿನ ಯುವಕರು ಸೇರಿ ಈ ಹಾರ ಅರ್ಪಣೆ ಮಾಡಿದ್ದಾರೆ. ಬೃಹತ್ ರುದ್ರಾಕ್ಷಿ ಹಾರ ನೋಡಲು ಅತ್ಯಂತ ಆಕರ್ಷಕವಾಗಿದೆ. ಬನವಾಸಿ ಜಾತ್ರೆಗೆ ಆಗಮಿಸಿದ ಸಹಸ್ರಾರು ಜನರು ಮಧುಕೇಶ್ವರ ದೇವರು ಆಸೀನಾಗಿದ್ದ ರಥಕ್ಕೆ ಅಲಂಕರಿಸಿದ ಮಾಲೆ ವೀಕ್ಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.