ADVERTISEMENT

ಭರ್ಜರಿ ವ್ಯಾಪಾರ ಕಂಡ ನಾಗಪುರ ಕಿತ್ತಳೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 10:35 IST
Last Updated 18 ಅಕ್ಟೋಬರ್ 2012, 10:35 IST

ಕಾರವಾರ: ನಗರದ ಬಿಎಸ್‌ಎನ್‌ಎಲ್ ಕಚೇರಿ ಎದುರು ಬುಧವಾರ ನಾಗಪುರದಿಂದ ತಂದಿರುವ ಕಿತ್ತಳೆ ಹಣ್ಣಿನ ವ್ಯಾಪಾರ ಭರ್ಜರಿಯಾಗಿ ನಡೆಯಿತು.

ಸುಮಾರು ಒಂದು ಮಿನಿ ಲಾರಿ ತುಂಬ ಕಿತ್ತಳೆ ಹಣ್ಣನ್ನು ತಂದು ರಸ್ತೆ ಬದಿಯಲ್ಲಿ ರಾಶಿಹಾಕಿ ವ್ಯಾಪಾರಸ್ಥರು ಮಾರಾಟ ಮಾಡುತ್ತಿದ್ದರು. ಕಿತ್ತಳೆ ಹಣ್ಣು ಕೆಜಿಗೆ ಮಾರುಕಟ್ಟೆಯಲ್ಲಿ ರೂ 60 ಇದೆ. ಆದರೆ ನಾಗಪುರದಿಂದ ತಂದ ಕಿತ್ತಲೆ ಹಣ್ಣನ್ನು ಕಿಲೋಗೆ ಕೇವಲ ರೂ 30ರಂತೆ ಮಾರಾಟ ಮಾಡುತ್ತಿದ್ದರು. ಕಡಿಮೆ ಬೆಲೆ ಇರುವುದರಿಂದ ಸಹಜವಾಗೇ ಗ್ರಾಹಕರು ಕಿತ್ತಳೆ ಹಣ್ಣಿನತ್ತ ಆಕರ್ಷಿತರಾಗಿ ಕಿಲೋಗಟ್ಟಲೇ ಕಿತ್ತಳೆ ಹಣ್ಣು ತೆಗೆದುಕೊಂಡು ಹೋದರು.

`ಕಳೆದ ಬಾರಿ ಕಾಶ್ಮೀರಿ ಸೇಬು ಹಣ್ಣು ತಂದು ಮಾರಾಟ ಮಾಡಿದ್ದೆ ಈ ಬಾರಿ ಕಿತ್ತಳೆ ಹಣ್ಣು ತಂದಿದ್ದೇನೆ. ಇದು ಖಾಲಿಯಾದ ನಂತರ ಮತ್ತೊಂದು ಲೋಡ್ ಹಣ್ಣು ತಂದು ಮಾರಾಟ ಮಾಡುತ್ತೇನೆ~ ಎಂದು ವ್ಯಾಪಾರಿ ಶಾನಬಾಗ `ಪ್ರಜಾವಾಣಿ~ಗೆ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.