ADVERTISEMENT

ಮುರ್ಡೇಶ್ವರದಲ್ಲಿ ಹರೀಶ್ ಶೇಟ್ ವರ್ತನೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 6:35 IST
Last Updated 12 ಜನವರಿ 2012, 6:35 IST

ಕುಮಟಾ: ಮುರ್ಡೇಶ್ವರದಲ್ಲಿ ನಡೆದ  ಕಾಂಗ್ರೆಸ್ ಸಮಾವೇಶದಲ್ಲಿ ಕಾಂಗ್ರೆಸ್ ಮಾಜಿ  ಕಾರ್ಯಕರ್ತ ಕುಮಟಾದ ಹರೀಶ್ ಶೇಟ್ ಎನ್ನುವವರು ತೋರಿದ ಅನುಚಿತ ವರ್ತನೆ ಖಂಡನೀಯ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊನ್ನಪ್ಪ ನಾಯಕ ತಿಳಿಸಿದರು.

ಬುಧವಾರ ಕರೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು , `ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯರೂ ಅಲ್ಲದ ಹರೀಶ್ ಶೇಟ್ ಕಾಂಗ್ರೆಸ್‌ನ ಹಿರಿಯ ನಾಯಕರು ಮಾತನಾಡುವಾಗ ದೇಶಪಾಂಡೆ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ  ಬೈದು ಸಭೆಯ ಗೌರವ ಹಾಳು ಮಾಡಿದ್ದಾರೆ. ಹಿಂದಿನ ಶಾಸಕ ದಿ. ಮೋಹನ ಶೆಟ್ಟಿ ಅವರ ವಿರುದ್ಧವೂ ಕ್ರಿಮಿನಲ್ ಮೊಕದ್ದಮೆ ಹೂಡಿದ್ದರು. ಅವರು ಹಿಂದೆ ಇದ್ದ ಪಕ್ಷದ ಎಲ್ಲ ಮುಖಂಡರು ವಿಧಾನಸಭೆ ಚುನಾವಣೆ ಯಲ್ಲಿ ಠೇವಣಿ ಕಳೆದುಕೊಂಡಿದ್ದಾರೆ. ನಮ್ಮ ಪಕ್ಷಕ್ಕೆ ಇಂಥ ಕಾರ್ಯಕರ್ತರು ಮುಂದೆ ಬೇಕಾಗಿಯೂ ಇಲ್ಲ ಎಂದರು. ಇದೇ ರೀತಿ ವರ್ತನೆ ತೋರಿದರೆ ಕಾನೂನು ಕ್ರಮ ಅನಿವಾರ್ಯ~ ಎಂದರು.

ಆರ್.ವಿ. ದೇಶಪಾಂಡೆ ಅಧ್ಯಕ್ಷರಿದ್ದಾಗ  ಕೆಪಿಸಿಸಿ ಕಚೇರಿಯಲ್ಲೇ ಕೆಲ ಕಾಂಗ್ರೆಸ್ ಕಾರ್ಯಕರ್ತರು ಅವರ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಅವರ ವಿರುದ್ಧ ಏನಾದರೂ ಕ್ರಮ ಆಗಿದೆಯೇ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ` ಪ್ರತಿಭಟನಾ ಕಾರರ ಗುಂಪಿನಲ್ಲಿ ಕುಮಟಾದ ಮೋಂಟಿ ಫರ್ನಾಂಡೀಸ್ ಇದ್ದರು. ಅವರನ್ನೆಲ್ಲ ಆಗ ಪಕ್ಷದಿಂದ ಅಮಾನತುಗೊಳಿಸಲಾಗಿತ್ತು. ಅದರ ನಂತರ ಅವರು ಪಕ್ಷದ ಸಂವಿ ಧಾನದಂತೆ ಕಾಂಗ್ರೆಸ್ ಸದಸ್ಯತ್ವ ಪಡೆದು ಕೊಳ್ಳದ್ದರಿಂದ ಅವರೂ ಈಗ ಪಕ್ಷದ ಕಾರ್ಯಕರ್ತರಾಗಿ ಉಳಿದಿಲ್ಲ, ಎಂದರು.

ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೆಗಡೆ, `ಪಕ್ಷಕ್ಕೆ ಪ್ರತಿಯಾಗಿ ಬೇರೆ ಸಂಘಟನೆಗಳನ್ನು ಪಕ್ಷದ ಕಾರ್ಯಕರ್ತರು ಹುಟ್ಟು ಹಾಕಲಿಕ್ಕೆ ಅವಕಾಶವಿಲ್ಲ~ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ. ಮಾಜಿ ಅಧ್ಯಕ್ಷರಾದ ಗಾಯತ್ರಿ ಗೌಡ, ಎಲ್.ವಿ. ಶಾನಭಾಗ, ಬ್ಲಾಕ್ ಕಾಂಗ್ರೆಸ್ ಉಪಾ ಧ್ಯಕ್ಷ  ನಾಗೇಶ ನಾಯ್ಕ ಕಲಭಾಗ,  ಜಿ.ಪಂ. ಮಾಜಿ ಸದಸ್ಯೆ ರೋಶನಿ ಭಟ್ಟ, ಯುವ ಕಾಂಗ್ರೆಸ್ ಅಧ್ಯಕ್ಷ ರವಿ ಶೆಟ್ಟಿ,  ಡಾ. ಜಿ.ಜಿ. ಹೆಗಡೆ, ಧೀರೂ ಶಾನ ಭಾಗ,  ಮಂಜುನಾಥ ಗೌಡ,  ಎಂ.ಡಿ. ನಾಯ್ಕ, ಮೋಹನ ಮೊದಲಾದವರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.