ಕುಮಟಾ: `ಸುಮಾರು 15-20 ವರ್ಷಗಳ ಹಿಂದೆ ಲೆದರ್ ಬಾಲ್ ಕ್ರಿಕೆಟ್ ಕುಮಟಾದಲ್ಲಿ ಮಹತ್ವ ಪಡೆದುಕೊಳ್ಳಲು ಕಾರಣವಾದ ಇಲ್ಲಿಯ ಮಹತ್ಮಾಗಾಂಧಿ ಕ್ರೀಡಾಂಗಣದಲ್ಲಿ ಸಚಿನ್, ಕುಂಬ್ಳೆಯಂಥ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಹೊರಹೊಮ್ಮಲಿ~ ಎಂದು ಹಿರಿಯ ಕ್ರಿಕೆಟ್ ಆಟಗಾರ ಹಾಗೂ ಉದ್ಯಮಿ ಸುನೀಲ್ ನಾಯ್ಕ ಸೋನಿ ಹೇಳಿದರು.
ಶುಕ್ರವಾರ ಇಲ್ಲಿ ಆರಂಭವಾದ ಅಂತರರಾಜ್ಯ ಲೆದರ್ ಬಾಲ್ 20-20 ಕ್ರಿಕೆಟ್ ಟೂರ್ನಿ ಉದ್ಘಾಟಿಸಿ ಮಾತನಾಡಿದ ಅವರು, `ಕಾಲೇಜು ದಿನಗಳಲ್ಲಿ ಜೊತೆಯಾಗಿ ಆಡಿದ ಅನೇಕ ಪ್ರತಿಭಾವಂತ ಆಟಗಾರರು ಈ ಟೂರ್ನಿ ನೆಪದಲ್ಲಿ ಲೆದರ್ ಬಾಲ್ ಕ್ರಿಕೆಟ್‌ಗೆ ಮರುಜೀವ ನೀಡಲು ಮತ್ತೆ ಒಂದೆಡೆ ಸೇರುವಂತೆ ಮಾಡಲು ಶ್ರಮಿಸಿದ್ದ ಶ್ರೇಯಸ್ಸು ಕುಮಟಾ ಎಕ್ಸ್‌ಲೆಂಟ್ ಕ್ರಿಕೆಟರ್ಸ್‌ಗೆ ಸೇರುತ್ತದೆ~ ಎಂದರು.
ಸಿಪಿಐ ಕೆ. ಶ್ರೀಕಾಂತ ಮಾತನಾಡಿದರು. ಹಿರಿಯ ಆಟಗಾರರಾದ ವೆಂಟ್ರಮಣ ಮೊಗೇರ, ಪ್ರದೀಪ ಆಚಾರ್ಯ, ರೋಟರಿ ಕ್ಲಬ್ ಅಧ್ಯಕ್ಷ ಹಾಗೂ ಹಿರಿಯ ಕ್ರಿಕೆಟ್ ಆಟಗಾರ ಸತೀಶ ನಾಯ್ಕ ತಮ್ಮ ಕ್ರಿಕೆಟ್ ಜೀವನವನ್ನು ಮೆಲಕು ಹಾಕಿದರು.
ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ವೈದ್ಯಾಧಿಕಾರಿ ಡಾ. ಶ್ರೀನಿವಾಸ ನಾಯಕ ಮಾತನಾಡಿ, `ಆರೋಗ್ಯ, ಮಾನಸಿಕ ನೆಮ್ಮದಿ, ಮನರಂಜನೆ ಹಾಗೂ ವ್ಯಕ್ತಿತ್ವ ವಿಕಸನ ಒಟ್ಟಿಗೆ ಸಿಗುವುದು ಕ್ರೀಡೆಯಿಂದ ಮಾತ್ರ ಸಾಧ್ಯ~ ಎಂದರು.
ಆರಂಭದಲ್ಲಿ ಎಕ್ಸ್‌ಲೆಂಟ್ ಕ್ರಿಕೆಟರ್ಸ್ ಸಮಿತಿ ಗೌರವಾಧ್ಯಕ್ಷ ಸೂರಜ್ ನಾಯ್ಕ ಸ್ವಾಗತಿಸಿದರು. ವೇದಿಕೆಯಲ್ಲಿ ಮುರ್ಡೇಶ್ವರದ ಮಹಾರಾಜ ಮೋಟಾರ್ಸ್‌ನ ಮುಕುಂದ ನಾಯ್ಕ ಇದ್ದರು. ಎಕ್ಸ್‌ಲೆಂಟ್ ಕ್ರಿಕೆಟರ್ಸ್ ಕಾರ್ಯದರ್ಶಿ ವಿನಾಯಕ ಶೆಟ್ಟಿ, ಸಮಿತಿಯ ಎಂ.ಎಂ. ಹೆಗಡೆ, ಶ್ರೀಕಾಂತ ಹೆಗಡೆ, ಮಹೇಂದ್ರ ನಾಯಕ, ಸಿದ್ಧಿಕ್ ಶಾಬಂದ್ರಿ, ಉಲ್ಲಾಸ ಗುಡಿಗಾರ ಮೊದಲಾದವರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.