ADVERTISEMENT

ರಾಷ್ಟ್ರೀಯ ಭಾವನೆ ಜಾಗೃತಗೊಳ್ಳಲಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 8:00 IST
Last Updated 3 ಜನವರಿ 2012, 8:00 IST

ಸಿದ್ದಾಪುರ:  ಎನ್‌ಎಸ್‌ಎಸ್ ಮತ್ತು ಎನ್‌ಸಿಸಿ ಚಟುವಟಿಕೆಗಳಿಂದ ವಿದ್ಯಾ ರ್ಥಿಗಳಲ್ಲಿ ರಾಷ್ಟ್ರೀಯ ಭಾವನೆ ಜಾಗೃತಗೊಳ್ಳಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಮುಗದೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ  ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್‌ನ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ದೇಶ ಮತ್ತು ಸಂಸ್ಕೃತಿಯ ಉಳಿವು ಯುವಕರಿಗೆ ಪ್ರಾಮುಖ್ಯವಾದ ವಿಷಯವಾಗಬೇಕು. ಈ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಬದ್ಧತೆ ಬರಬೇಕು. ದೇಶ ಮೊದಲು ಎಂಬ ಭಾವನೆ ಅವರಲ್ಲಿ ಜಾಗೃತವಾಗಬೇಕು ಎಂದರು.

ನಮ್ಮ  ಯುವ ಸಮುದಾಯದಲ್ಲಿ  ರಾಷ್ಟ್ರೀಯ ಭಾವನೆ ಅಥವಾ  ತತ್ವ ಸಿದ್ಧಾಂತವನ್ನು ತರುವಲ್ಲಿ ವಿಫಲರಾಗು ತ್ತಿದ್ದೇವೆ. ಇದು ಹಲವು ಸಮಸ್ಯೆಗಳಿಗೆ ಕಾರಣವಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಪ.ಪಂ. ಅಧ್ಯಕ್ಷ ಕೆ.ಜಿ.ನಾಯ್ಕ,ಜಿ.ಪಂ.ಸದಸ್ಯ ಈಶ್ವರ ನಾಯ್ಕ,ತಾ.ಪಂ.ಸದಸ್ಯೆ  ಸರೋಜಾ ಅಡೆಮನೆ, ಗ್ರಾ.ಪಂ. ಅಧ್ಯಕ್ಷ ಅಣ್ಣಪ್ಪ ಮಡಿವಾಳ,ಎಸ್‌ಡಿಎಂಸಿ ಅಧ್ಯಕ್ಷ ಆರ್.ಎಸ್.ಹೆಗಡೆ, ತಹಸೀಲ್ದಾರ ಗಣಪತಿ ಕಟ್ಟಿನಕೆರೆ, ಬಿಇಒ ಬಿ.ವಿ.ನಾಯ್ಕ,ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಯೋಜನಾಧಿಕಾರಿ ಎಂ.ವೈ. ಖಾನ್ ಮತ್ತಿತರರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯ ಗೋಪಾಲ ಕೃಷ್ಣ ಹೆಗಡೆ ಅಧ್ಯಕ್ಷತೆ ವಹಿಸಿದ್ದರು.

ಮಾರುತಿ ಗೌಡ ಸ್ವಾಗತಿಸಿದರು. ಮಹಾವೀರ ಪ್ರಾಸ್ತಾವಿಕ ಮಾತನಾಡಿ ದರು.
ಎಸ್.ಜಿ.ಹೆಗಡೆ ಮತ್ತು      ಆರ್.  ಎಸ್.ಹೆಗಡೆ ಮನವಿ ಸಲ್ಲಿಸಿದರು. ಕುಸಮಾ ಪೈ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.