ಯಲ್ಲಾಪುರ: `ಸಮಾಜ ಜೀವಿಗಳಾದ ನಾವು ಮಾನವೀಯ ಗುಣಗಳನ್ನು ಹೊಂದಿ ನಮ್ಮ ಕೈಲಾದ ಸಹಾಯವನ್ನು ಸಮಾಜಕ್ಕಾಗಿ ಮಾಡಬೇಕು. ಅಂದಾಗ ಮಾತ್ರ ತ್ಯಾಗ ಬಲಿದಾನದ ಮೂಲಕ ಪಡೆದ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಬರುತ್ತದೆ.~ ಎಂದು ತಹಶೀಲ್ದಾರ ಎಂ.ವಿ.ಕಲ್ಲೂರುಮಠ ಹೇಳಿದರು.
ಪಟ್ಟಣದ ಕಾಳಮ್ಮನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ 66 ಸ್ವಾತಂತ್ರ್ಯೋತ್ಸವದ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.ಪೊಲೀಸ್ ಇಲಾಖೆ, ಗೃಹ ರಕ್ಷಕ ದಳ. ಎನ್.ಸಿ.ಸಿ. ಎನ್.ಎಸ್.ಎಸ್. ಭಾರತೀಯ ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ವಿವಿದ ಶಾಲೆಯ ಮಕ್ಕಳು ಪಥಸಂಚಲನ ನಡೆಸಿ ಗೌರವ ರಕ್ಷೆ ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಗಿರಿಜಾ ಕೊಂಬೆ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಟಿ.ಮರಾಠೆ, ಜಿ.ಪಂ.ಸದಸ್ಯ ರಾಘವೇಂದ್ರ ಭಟ್ಟ , ಪ.ಪಂ. ಸದಸ್ಯರಾದ ರಾಮು ನಾಯ್ಕ, ರವಿಚಂದ್ರ ನಾಯ್ಕ, ಸಿಪಿಐ ಅರವಿಂದ ಕಲಗುಜ್ಜಿ , ಬಿಇಓ ಎನ್.ಜಿ.ನಾಯಕ, ಪ್ರಮುಖರಾದ ಪ್ರಮೋದ ಹೆಗಡೆ, ಪಿ.ಜಿ.ಭಟ್ಟ ವಡ್ರಮನೆ, ನಾರಾಯಣ ನಾಯಕ, ಮಹಮ್ಮದ ಗೌಸ್, ಎಂ.ಆರ್.ಹೆಗಡೆ, ಅಪ್ಪಾ ಬಾಳಗಿ, ಉಲ್ಲಾಸ ಶಾನಭಾಗ, ವಿಜಯ್‌ಹೇಂದ್ರೆ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.