ADVERTISEMENT

ಸೋರುತ್ತಿದೆ ತಾಲ್ಲೂಕು ಆಸ್ಪತ್ರೆ ಚಾವಣಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2018, 12:04 IST
Last Updated 12 ಜೂನ್ 2018, 12:04 IST

ಯಲ್ಲಾಪುರ: ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಪಟ್ಟಣದ ತಾಲ್ಲೂಕು ಆಸ್ಪತ್ರೆ ಕಟ್ಟಡದ ಚಾವಣಿ ಸೋರುತ್ತಿದ್ದು, ಕಳಪೆ ಗುಣಮಟ್ಟದ ಕಾಮಗಾರಿ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ತಾಟಜಿಟಗಕಿನ ಕೇಂದ್ರ ಸ್ಥಳದಲ್ಲಿ‌ದ್ದ ಸಮುದಾಯ ಆರೋಗ್ಯ ಕೇಂದ್ರವನ್ನು30 ಹಾಸಿಗೆಯ ಆಸ್ಪತ್ರೆಯಿಂದ 100 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿ, ಕಳೆದ 2 ವರ್ಷದಿಂದ ವಿವಿಧ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ₹ 6 ಕೋಟಿ ವೆಚ್ಚದಲ್ಲಿ ಶೇ 99 ರಷ್ಟು ಕಾಮಗಾರಿ
ಗಳು ಪೂರ್ಣಗೊಂಡಿವೆ. ಕೋಟ್ಯಂತರ ಹಣ ವಿನಿಯೋಗಿಸಿ ಮಾಡಿರುವ ಕಾಮಗಾರಿ ಕಳಪೆ ಗುಣಮಟ್ಟದ್ದಾಗಿರುವುದು ಕಂಡು ಬಂದಿದೆ. ಮಳೆ ನೀರು ಕಟ್ಟಡದ ಒಳಗೆ ಹನಿಯುತ್ತಿದೆ. ಮಲೆನಾಡಿನ ಇಂತಹ ಪ್ರದೇಶಗಳಲ್ಲಿ ಆರ್.ಸಿ.ಸಿ. ಕಟ್ಟಡಗಳನ್ನು ಕಟ್ಟುವಾಗ ಮುನ್ನೆಚ್ಚರಿಕೆ ವಹಿಸದಿದ್ದರೆ ಅವಘಡಗಳು ಸಂಭವಿಸಲಿವೆ. ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಆಸ್ಪತ್ರೆ ಕಟ್ಟಡ ಸೋರುತ್ತಿದೆ. ಕಟ್ಟಡದ ಮೇಲೆ ತಗಡಿನ ಹೊದಿಕೆ ನಿರ್ಮಿಸಿದರೆ ಮಾತ್ರ ಸೋರುವುದು ನಿಲ್ಲುತ್ತದೆ. ಈ ಬಗ್ಗೆ ಶಾಸಕರ ಗಮನ ಸೆಳೆಯಲಾಗಿದೆ
ಡಾ.ರಾಮಾ ಹೆಗಡೆ, ತಾಲ್ಲೂಕು ಆಸ್ಪತ್ರೆ ವೈದ್ಯಾಧಿಕಾರಿ‌

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.