ADVERTISEMENT

ಹಿಚ್ಕಡ: ಬೋನಿಗೆ ಬಿದ್ದ ಚಿರತೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 5:36 IST
Last Updated 14 ಡಿಸೆಂಬರ್ 2013, 5:36 IST
ಅಂಕೋಲಾದ ಹಿಚ್ಕಡದಲ್ಲಿ ಗುರುವಾರ ರಾತ್ರಿ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಬಿದ್ದ ಗಂಡು ಚಿರತೆ
ಅಂಕೋಲಾದ ಹಿಚ್ಕಡದಲ್ಲಿ ಗುರುವಾರ ರಾತ್ರಿ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಬಿದ್ದ ಗಂಡು ಚಿರತೆ   

ಅಂಕೋಲಾ: ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಗಂಡು ಚಿರತೆ ಯೊಂದು ಬಂಧಿಯಾದ ಘಟನೆ ತಾಲ್ಲೂಕಿನ ಹಿಚ್ಕಡ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.

ಕಳೆದ ಹಲವು ತಿಂಗಳುಗಳಿಂದ ಚಿರತೆಯ ಕಾಟಕ್ಕೆ ಬೇಸತ್ತಿದ್ದ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ಸಲ್ಲಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಅರಣ್ಯ ಇಲಾಖೆಯವರು ಗುರುವಾರ ರಾತ್ರಿ ಹಿಚ್ಕಡ ಗ್ರಾಮದ ಅರಣ್ಯ ಪ್ರದೇಶದ ಸರಹದ್ದಿನಲ್ಲಿ ನಾಯಿ ಮರಿಗಳನ್ನು ಹಾಕಿದ ಬೋನನ್ನು ಇಡಲಾಗಿತ್ತು.

ಗುರುವಾರ ರಾತ್ರಿ ಬೇಟೆಗೆ ಬಂದ ಈ ಚಿರತೆ ಬೋನಿ ನೊಳಗೆ ತೆರಳುತ್ತಿದ್ದಂತೆಯೇ ಬಂಧಿಯಾ ಯಿತು. ಇದರಿಂದಾಗಿ ಸ್ಥಳೀಯರು ತಕ್ಕ ಮಟ್ಟಿಗೆ ನಿಟ್ಟುಸಿರು ಬಿಟ್ಟಿದ್ದಾರೆ. ಶುಕ್ರವಾರ ಈ ಚಿರತೆಯನ್ನು ಜೋಯಿಡಾದ ಅಣಶಿ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.