ADVERTISEMENT

ಹೊರರಾಜ್ಯದ ಮೀನುಗಾರರ ವಿರುದ್ಧ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2013, 5:19 IST
Last Updated 10 ಡಿಸೆಂಬರ್ 2013, 5:19 IST

ಅಂಕೋಲಾ: ‘ತಾಲ್ಲೂಕಿನ ಮಂಜಗುಣಿ ಯಲ್ಲಿ ತಮಿಳುನಾಡು ರಾಜ್ಯದ ಮೀನುಗಾರರು ಬಂದು ಅಕ್ರಮ ಮೀನುಗಾರಿಕೆ  ಚಟುವಟಿಕೆಯಲ್ಲಿ ತೊಡಗಿದ್ದಾರೆ. ಇದರಿಂದಾಗಿ ಸ್ಥಳೀಯ ಮೀನುಗಾರರಿಗೆ ತೊಂದರೆಯಾಗು ತ್ತಿದೆ

. ಈ ಕುರಿತು ಜಿಲ್ಲಾಡಳಿತ ಹೊರ ರಾಜ್ಯದ ಮೀನುಗಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಅಖಿಲ ಕರ್ನಾಟಕ ಕರಾವಳಿ ಪರ್ಶಿಯನ್‌ ಹಾಗೂ ಸಾಂಪ್ರದಾಯಿಕ ಮೀನು ಗಾರರ ಒಕ್ಕೂಟದ ರಾಜ್ಯ ಸಮಿತಿಯ ಶ್ರೀಕಾಂತ ದುರ್ಗೇಕರ ಆಗ್ರಹಿಸಿದ್ದಾರೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಅಸಂಪ್ರದಾಯಿಕ ಮೀನುಗಾರಿಕೆಯನ್ನು ನಿಷೇಧಿಸಿದ್ದರೂ ಹೊರರಾಜ್ಯದ ಮೀನುಗಾರರು ಉತ್ತರ ಕನ್ನಡ ಜಿಲ್ಲೆಯಲ್ಲಿ  ಕಾನೂನನ್ನು ಉಲ್ಲಂಘಿಸಿ ಮೀನುಗಾರಿಕೆಯಲ್ಲಿ ತೊಡಗಿದ್ದಾರೆ. ಇಂಥವರ ವಿರುದ್ಧ ಜಿಲ್ಲಾಡಳಿತವಾಗಲಿ ಕರಾವಳಿ ಕಾವಲು ಪಡೆಯಾಗಲಿ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೀನುಗಾರರ ಮುಖಂಡ ನಾಗೇಶ ಹರಿಕಾಂತ ಮಾತನಾಡಿ, ‘ಈ ಕುರಿತ ಸಂಬಂಧಿಸಿದ ಅಧಿಕಾರಿಗಳಿಗೆ ದೂರು  ಸಲ್ಲಿಸಾಗಿದೆ. ಆದರೂ ಯಾವುದೇ ಕ್ರಮ ಕೈಗೊಳ್ಳದೇ ಅಕ್ರಮ ಮೀನುಗಾರಿಕೆಗೆ ಪರೋಕ್ಷವಾಗಿ  ಬೆಂಬಲಿಸುತ್ತಿದ್ದಾರೆ. ಸ್ಥಳೀಯ ಕೆಲವು ಪಟ್ಟಭದ್ರ ಹಿತಾಸಕ್ತಿ ಗಳು ಇಂಥವರಿಗೆ ಆಶ್ರಯ ನೀಡಿರುವು ದರ ಬಗ್ಗೆ  ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ  ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಮೀನುಗಾರರ ಪ್ರಮುಖರಾದ ಪ್ರಮೋದ ಬಾನಾವಳಿಕರ, ಸುಧಾಕರ ಜಾಂಬವಳಿಕರ, ಜಗದೀಶ ಖಾರ್ವಿ, ನರೇಶ ತಾಂಡೇಲ, ರಾಮಚಂದ್ರ ತಾಂಡೇಲ, ವಿಷ್ಣು ಕುಡ್ತಳಕರ, ಬೇಬಿ ಹರಿಕಂತ್ರ, ಶೀತಲ ತಾಂಡೇಲ, ಉಮೇಶ ಆರ್. ತಾಂಡೇಲ, ಅಂಜಲಿ  ತಾಂಡೇಲ, ಸುಲೋಚನಾ ತಾಂಡೇಲ, ಗೌರಿ ತಾಂಡೇಲ, ನಾಗೇಶ  ಅಂಬಿಗ, ಹೂವಾ ಖಂಡೇಕರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.