ADVERTISEMENT

‘ಚುನಾವಣೆಗೆ ಮೊದಲೇ ಸೋಲೊಪ್ಪಿದ ಕಾಂಗ್ರೆಸ್‌’

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 9:36 IST
Last Updated 17 ಮಾರ್ಚ್ 2014, 9:36 IST

ಭಟ್ಕಳ: ‘ಟಿಕೆಟ್‌ಗಾಗಿ ಪರಸ್ಪರ ಕಾಲೆಳೆದುಕೊಳ್ಳುತ್ತಿರುವ ಕಾಂಗ್ರೆಸ್‌ ಜಿಲ್ಲೆಯಲ್ಲಿ ಚುನಾವಣೆಗೂ ಮೊದಲೇ ಸೋಲನ್ನು ಒಪ್ಪಿಕೊಂಡಿದೆ’ ಎಂದು ಸಂಸದ ಹಾಗೂ ಕೆನರಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ಹೇಳಿದರು.

ಶಿರಾಲಿ ಶಾರದಹೊಳೆ ನಾಮಧಾರಿ ಸಭಾಭವನದಲ್ಲಿ ಭಾನುವಾರ ನಡೆದ ಬೂತ್‌ಮಟ್ಟದ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು. 

‘ದೇಶಕ್ಕೆ ದಿಟ್ಟ ನಾಯಕತ್ವದ ಅಗತ್ಯತೆ ಇದ್ದು, ನರೇಂದ್ರ ಮೋದಿಯವರು ಮುಂದಿನ ದಿನಗಳಲ್ಲಿ ಪ್ರಧಾನಿಯಾಗುವ ಮೂಲಕ ಆ ಕೊರತೆಯನ್ನು ತುಂಬಲಿದ್ದಾರೆ. ರಾಜಕೀಯದಲ್ಲಿ ಕೇಜ್ರಿವಾಲ್‌ ಕ್ಷಣಿಕ ಮಾತ್ರ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಜಿ ನಾಯ್ಕ, ಪ್ರಮುಖರಾದ ಗಾಯತ್ರಿಗೌಡ, ಸೂರಜ್‌ ಸೋನಿ, ವಿನೋದ ಪ್ರಭು, ಕೇಶವ ಬಳ್ಕೂರ್‌, ಕೃಷ್ಣ ನಾಯ್ಕ ಆಸರಕೇರಿ ಮುಂತಾದವರು ಮಾತನಾಡಿದರು.

ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಈಶ್ವರ ದೊಡ್ಮನೆ ಸ್ವಾಗತಿಸಿದರು. ಜಿಲ್ಲಾ ಘಟಕದ ಕಾರ್ಯದರ್ಶಿ ಗೋವಿಂದ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಗದೀಶ ಜೈನ್‌ ನಿರೂಪಿಸಿದರು.

ಮದನ್‌ ನಾಯ್ಕ, ಸುಭದ್ರಾ ದೇವಾಡಿಗ, ಸವಿತಾ ಗೊಂಡ, ದಿನೇಶ ನಾಯ್ಕ, ರಾಜು ಮುರ್ಡೇಶ್ವರ, ಪಾರ್ಶ್ವನಾಥ ಜೈನ್‌, ನಾಗರಾಜ ಹೆಗಡೆ, ಶಾಂತಿ ಮೊಗೇರ್‌, ಕಿಶನ್‌ಬಲ್ಸೆ, ವೆಂಕಟೇಶ ನಾಯ್ಕ ಸೇರಿದಂತೆ ನೂರಾರು ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.