ADVERTISEMENT

35 ಕ್ವಿಂಟಲ್ ಪಂಚಕಜ್ಜಾಯ ವಿತರಣೆ

ಅಂಗಾರಕ ಸಂಕಷ್ಠಿ: ಇಡಗುಂಜಿಗೆ ಭಕ್ತರ ಮಹಾಪೂರ

​ಪ್ರಜಾವಾಣಿ ವಾರ್ತೆ
Published 28 ಜುಲೈ 2021, 4:11 IST
Last Updated 28 ಜುಲೈ 2021, 4:11 IST
ಹೊನ್ನಾವರ ತಾಲ್ಲೂಕಿನ ಶ್ರೀಕ್ಷೇತ್ರ ಇಡಗುಂಜಿಯಲ್ಲಿ ಮಂಗಳವಾರ ಅಂಗಾರಕ ಸಂಕಷ್ಠಿಯ ದಿನ ಸಾವಿರಾರು ಭಕ್ತರು ದೇವರ ದರ್ಶನ ಪಡೆದರು
ಹೊನ್ನಾವರ ತಾಲ್ಲೂಕಿನ ಶ್ರೀಕ್ಷೇತ್ರ ಇಡಗುಂಜಿಯಲ್ಲಿ ಮಂಗಳವಾರ ಅಂಗಾರಕ ಸಂಕಷ್ಠಿಯ ದಿನ ಸಾವಿರಾರು ಭಕ್ತರು ದೇವರ ದರ್ಶನ ಪಡೆದರು   

ಹೊನ್ನಾವರ: ನಾಡಿನ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲೊಂದಾದ ಶ್ರೀಕ್ಷೇತ್ರ ಇಡಗುಂಜಿಯಲ್ಲಿ ಮಂಗಳವಾರ, ಅಂಗಾರಕ ಸಂಕಷ್ಠಿಯ ದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದು ಶ್ರೀದೇವರ ದರ್ಶನ ಪಡೆದರು.

ಕೋವಿಡ್ ಲಾಕ್ ಡೌನ್ ತೆರವಿನ ನಂತರದ ಮೊದಲ ಅಂಗಾರಕ ಸಂಕಷ್ಠಿ ಇದಾಗಿದ್ದು ನಿರೀಕ್ಷೆಗೂ ಮೀರಿ ಜನ ಪ್ರವಾಹ ಹರಿದುಬಂದಿತು. ರಾತ್ರಿಯ ಪೂಜೆಯಲ್ಲೂ ಹಲವಾರು ಭಕ್ತರು ಪಾಲ್ಗೊಂಡರು. ಗಣಹವನ, ಸತ್ಯಗಣಪತಿ ವ್ರತ, ಪಂಚಾಮೃತ ಅಭಿಷೇಕ ಮೊದಲಾದ ಸೇವೆಗಳನ್ನು ಭಕ್ತರು ದೇವರಿಗೆ ಸಲ್ಲಿಸಿದರು.

'35 ಕ್ವಿಂಟಲ್ ಪಂಚಕಜ್ಜಾಯ ವಿತರಣೆ ಆಯಿತು' ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.