ADVERTISEMENT

ಕಾಲರುದ್ರೇಶ್ವರ ದೇಗುಲದಲ್ಲಿ ಸ್ವಚ್ಛತಾ ಕಾರ್ಯ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2018, 11:24 IST
Last Updated 11 ಫೆಬ್ರುವರಿ 2018, 11:24 IST
ಕಾರವಾರದ ಪಿಂಗೆ ರಸ್ತೆಯಲ್ಲಿರುವ ಕಾಲರುದ್ರೇಶ್ವರ ದೇವಸ್ಥಾನದಲ್ಲಿ ಪಹರೆ ವೇದಿಕೆ ಸದಸ್ಯರು ಮತ್ತು ಸೇಂಟ್ ಮಿಲಾಗ್ರಿಸ್ ಸಹಕಾರ ಸಂಘದ ಸಿಬ್ಬಂದಿ ಶನಿವಾರ ಸ್ವಚ್ಛತಾ ಕಾರ್ಯ ಹಮ್ಮಿಕೊಂಡರು
ಕಾರವಾರದ ಪಿಂಗೆ ರಸ್ತೆಯಲ್ಲಿರುವ ಕಾಲರುದ್ರೇಶ್ವರ ದೇವಸ್ಥಾನದಲ್ಲಿ ಪಹರೆ ವೇದಿಕೆ ಸದಸ್ಯರು ಮತ್ತು ಸೇಂಟ್ ಮಿಲಾಗ್ರಿಸ್ ಸಹಕಾರ ಸಂಘದ ಸಿಬ್ಬಂದಿ ಶನಿವಾರ ಸ್ವಚ್ಛತಾ ಕಾರ್ಯ ಹಮ್ಮಿಕೊಂಡರು   

ಕಾರವಾರ: ನಗರದ ಪಿಂಗೆ ರಸ್ತೆಯಲ್ಲಿರುವ ಕಾಲರುದ್ರೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಉತ್ಸವ ಪ್ರಯುಕ್ತ ಪಹರೆ ವೇದಿಕೆ ಮತ್ತು ಸೇಂಟ್ ಮಿಲಾಗ್ರಿಸ್ ಸಹಕಾರ ಸಂಘದಿಂದ ಶನಿವಾರ ಜಂಟಿಯಾಗಿ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಯಿತು.

ನಗರದ ವಿವಿಧ ಪ್ರದೇಶಗಳಲ್ಲಿ ವಾರಕ್ಕೊಮ್ಮೆ ಸ್ವಚ್ಛತಾ ಕಾರ್ಯ ಆಯೋಜಿಸುತ್ತಿರುವ ಪಹರೆ ವೇದಿಕೆಯು, ಈ ಬಾರಿ ಶಿವರಾತ್ರಿ ಉತ್ಸವದ ಅಂಗವಾಗಿ ಕಾಲರುದ್ರೇಶ್ವರ ದೇವಸ್ಥಾನದ ಸುತ್ತಮುತ್ತ ಸ್ವಚ್ಚತಾ ಕಾರ್ಯ ನಡೆಸಿತು‌. ಸಹಕಾರ ಸಂಘದ ಅಧ್ಯಕ್ಷ ಜಾರ್ಜ್ ಹಾಗೂ ಸಿಬ್ಬಂದಿ ಜತೆಗಿದ್ದು ಧಾರ್ಮಿಕ ಸಾಮರಸ್ಯ ಮೆರೆದರು.

ಶಿವರಾತ್ರಿ ಹಬ್ಬದ ದಿನವಾದ ಫೆ.13ರಂದು ಬೆಳಿಗ್ಗೆಯಿಂದ ರಾತ್ರಿಯವರೆಗೆ ದೇವಾಲಯಕ್ಕೆ ಸಾವಿರಾರು ಭಕ್ತರು ಬರಲಿದ್ದಾರೆ. ದೇಗುಲದ ಸುತ್ತಲೂ ಅವರು ಕುಳಿತುಕೊಳ್ಳುವ ಕಾರಣ ಸ್ವಚ್ಛತೆ ಮಾಡಲಾಯಿತು.

ADVERTISEMENT

ಈ ಸಂದರ್ಭದಲ್ಲಿ ಪಹರೆ ವೇದಿಕೆ ವೇದಿಕೆ ಅಧ್ಯಕ್ಷ ನಾಗರಾಜ ನಾಯಕ, ಪ್ರಮುಖರಾದ ಕೈರುನ್ನೀಸಾ, ರಾಮಾ ನಾಯ್ಕ್, ಜಗದೀಶ್ ನಾಯಕ, ಸುರೇಶ್ ಶೆಟ್ಟಿ, ಸುನಿಲ್ ನಾಯ್ಕ್ ಸೋನಿ, ಅಜಯ್ ಸಾಹುಕಾರ್, ಪತ್ರಕರ್ತರಾದ ಟಿ.ಬಿ.ಹರಿಕಾಂತ್, ವಸಂತಭಟ್ ಕತಗಾಲ್, ಸೇಂಟ್ ಮಿಲಾಗ್ರಿಸ್ ಸಹಕಾರ ಸಂಘದ ಸಿಬ್ಬಂದಿ ಫರ್ಜಾನ್ ಶೇಕ್, ರಾಕಿ ನಾಯ್ಕ, ಅಚಲ ನಾಯ್ಕ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.