ADVERTISEMENT

ಕಾಣಕೋಣ ಸಮೀಪ ಪರ್ತಗಾಳಿಲಿ 77 ಅಡಿ ಎತ್ತರದ ಶ್ರೀರಾಮ ಪ್ರತಿಮೆ ಲೋಕಾರ್ಪಣೆಗೆ ಸಜ್ಜು

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 20:14 IST
Last Updated 24 ನವೆಂಬರ್ 2025, 20:14 IST
ಗೋವಾದ ಕಾಣಕೋಣ ಸಮೀಪದ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಬಳಿ 77 ಅಡಿ ಎತ್ತರದ ಶ್ರೀರಾಮನ ಪ್ರತಿಮೆಯ ಅಳವಡಿಕೆಯ ಅಂತಿಮ ಹಂತದ ಕಾರ್ಯ ನಡೆಯುತ್ತಿರುವುದು.
–ಪ್ರಜಾವಾಣಿ ಚಿತ್ರ:ಗಣಪತಿ ಹೆಗಡೆ
ಗೋವಾದ ಕಾಣಕೋಣ ಸಮೀಪದ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಬಳಿ 77 ಅಡಿ ಎತ್ತರದ ಶ್ರೀರಾಮನ ಪ್ರತಿಮೆಯ ಅಳವಡಿಕೆಯ ಅಂತಿಮ ಹಂತದ ಕಾರ್ಯ ನಡೆಯುತ್ತಿರುವುದು. –ಪ್ರಜಾವಾಣಿ ಚಿತ್ರ:ಗಣಪತಿ ಹೆಗಡೆ   

ಕಾರವಾರ: ಗೋವಾ ರಾಜ್ಯದ ಕಾಣಕೋಣ ಸಮೀಪದ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ್  ಆವರಣದಲ್ಲಿ 77 ಅಡಿ ಎತ್ತರದ ಶ್ರೀರಾಮನ ಕಂಚಿನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ನ. 28ರಂದು ಅನಾವರಣಗೊಳಿಸುವರು.

ನವೆಂಬರ್ 27ರಂದು ಪ್ರತಿಮೆಯ ಪ್ರಾಣಪ್ರತಿಷ್ಠೆ ಕಾರ್ಯಕ್ರಮ ನಡೆಯಲಿದೆ.

‘ಗುಜರಾತ್‌ನಲ್ಲಿ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಏಕತಾ ಪ್ರತಿಮೆ ನಿರ್ಮಿಸಿರುವ ನೊಯ್ಡಾದ ರಾಮ್‌ಸುತಾರ್ ಅವರ ಮಾರ್ಗದರ್ಶನದಲ್ಲಿ ಪ್ರತಿಮೆ ನಿರ್ಮಾಣವಾಗಿದೆ. ಮೂರು ಪ್ರತ್ಯೇಕ ಭಾಗವಾಗಿಸಿ ಪರ್ತಗಾಳಿಗೆ ಪ್ರತಿಮೆ ತರಲಾಗಿದೆ. 

ADVERTISEMENT

‘ಮಠ ಸ್ಥಾಪನೆಗೊಂಡು 550 ವರ್ಷ ಕಳೆದ ಸ್ಮರಣಾರ್ಥ ರಾಮನ ಪ್ರತಿಮೆ ಸ್ಥಾಪಿಸಲಾಗುತ್ತಿದೆ’ ಎಂದು ಪೀಠಾಧಿಪತಿ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.