ಭಟ್ಕಳ: ಮಹಿಳೆ ಸ್ವಾವಲಂಬಿಯಾದಾಗ ಕೌಟುಂಬಿಕ ದೌರ್ಜನ್ಯದಿಂದಲೂ ರಕ್ಷಣೆ ಪಡೆದುಕೊಳ್ಳುತ್ತಾಳೆ ಎಂದು ಭಟ್ಕಳ ಏಜುಕೇಶನ್ ಟ್ರಸ್ಟ್‌ನ ಮ್ಯಾನೇಜರ್ ರಾಜೇಶ ನಾಯಕ್ ಹೇಳಿದರು.
ಮಣಿಪಾಲ ಟೆಕ್ನಾಲಜೀಸ್ ಮತ್ತು ಭಾರತೀಯ ವಿಕಾಸ ಟ್ರಸ್ಟ್ ಹಾಗೂ ಭಟ್ಕಳ ಏಜುಕೇಶನ್ ಟ್ರಸ್ಟಿನ ರೋಟರಿ ವೋಕೇಶನಲ್ ಟ್ರೇನಿಂಗ್ ಸೆಂಟರ್ ಸಹಯೋಗದಲ್ಲಿ ನಡೆದ ಏಳು ದಿನಗಳ ಸೀರೆ ಕುಚ್ಚು ಕಟ್ಟುವ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಟ್ರಸ್ಟ್‌ನ ರಾಘವೇಂದ್ರ ಆಚಾರ್ಯ, ದಿ ನ್ಯೂ ಇಂಗ್ಲಿಷ್ ಪಿ.ಯು. ಕಾಲೇಜು ಪ್ರಾಂಶುಪಾಲ ವಿರೇಂದ್ರ ವಿ. ಶ್ಯಾನಭಾಗ, ಮುಖ್ಯ ಶಿಕ್ಷಕ ಗಣಪತಿ ಶಿರೂರು, ಟೇಲರಿಂಗ್ ತರಬೇತುದಾರ ರೇಷ್ಮಾ, ಸೀರೆ ಕುಚ್ಚು ತರಬೇತಿದಾರ್ತಿ ನಿಶ್ಮಿತಾ ತೆಕ್ಕಟ್ಟೆ ಇದ್ದರು. ಭಟ್ಕಳ ಏಜುಕೇಶನ್ ಟ್ರಸ್ಟ್‌ನ ಸುರೇಶ ನಾಯಕ್ ಅಧ್ಯಕ್ಷತೆ ವಹಿಸಿದ್ದರು.
ಶಿಬಿರದಲ್ಲಿ ಪಾಲ್ಗೊಂಡ 40 ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.