ADVERTISEMENT

ಶಿರಸಿಯ ಅಭಿಜ್ಞಾ, ವಾಯುಸೇನೆಯ ಫ್ಲೈಯಿಂಗ್ ಅಧಿಕಾರಿಯಾಗಿ ಕರ್ತವ್ಯಕ್ಕೆ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 14:11 IST
Last Updated 23 ಜೂನ್ 2022, 14:11 IST
ತಂದೆ ಹಾಗೂ ತಾಯಿ ಜತೆ ಅಭಿಜ್ಞಾ ಹೆಗಡೆ
ತಂದೆ ಹಾಗೂ ತಾಯಿ ಜತೆ ಅಭಿಜ್ಞಾ ಹೆಗಡೆ   

ಶಿರಸಿ: ತಾಲ್ಲೂಕಿನ ಬೆಂಗಳೆ ಗ್ರಾಮದ ಹಾಡಲಗಿ ಮನೆಯ ಅಭಿಜ್ಞಾ ಹೆಗಡೆ ಭಾರತೀಯ ವಾಯು ಸೇನೆಯಲ್ಲಿ ಫ್ಲೈಯಿಂಗ್ ಅಧಿಕಾರಿಯಾಗಿ ಕರ್ತವ್ಯಕ್ಕೆ ಸೇರ್ಪಡೆ ಆಗಿದ್ದಾರೆ.

ಪುಣೆಯ ಆರ್ಮ್ಡ್ ಫೋರ್ಸಸ್ ಮೆಡಿಕಲ್ ಕಾಲೇಜ್‍ನಲ್ಲಿ ವೈದ್ಯಕೀಯ ಪದವಿಯಲ್ಲಿ ವರ್ಗಕ್ಕೆ ಮೊದಲ ಸ್ಥಾನ ಪಡೆಯುವ ಮೂಲಕ ಈ ಹುದ್ದೆಗೆ ಏರಿದ್ದಾರೆ. ಪ್ರಸ್ತುತ ಅವರು ಉತ್ತರ ಪ್ರದೇಶದ ಕಾನ್ಪುರ ವಾಯು ನೆಲೆಯ ಕಮಾಂಡ್ ಹಾಸ್ಪಿಟಲ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.

ಅಭಿಜ್ಞಾ ಅವರು ಹಾಡಲಗಿಮನೆಯ ಗಣೇಶ ಹೆಗಡೆ ಹಾಗೂ ಜಯಾ ಹೆಗಡೆ ದಂಪತಿಯ ಪುತ್ರಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.