ಅಂಕೋಲಾ: ‘ಉದ್ಯೋಗ ಪಡೆಯಲು ಮತ್ತು ಜೀವನದಲ್ಲಿ ಯಶಸ್ವಿಯಾಗಲು ವಿದ್ಯಾರ್ಥಿಗಳು ಅಗತ್ಯ ಕೌಶಲ ಪಡೆದರೆ ಮಾತ್ರ ಮುಂದಿನ ದಿನಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಧ್ಯ’ ಎಂದು ಪ್ರಾಚಾರ್ಯೆ ವಿದ್ಯಾ ದೇವಿದಾಸ್ ನಾಯಕ ಹೇಳಿದರು.
ತಾಲ್ಲೂಕಿನ ಪೂಜಗೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಭವನದಲ್ಲಿ ರಾಜ್ಯ ಕಾಲೇಜು ಶಿಕ್ಷಣ ಇಲಾಖೆ, ಪ್ಲೇಸ್‌ಮೆಂಟ್ ಸೆಲ್, ಐಕ್ಯುಎಸಿ ಮತ್ತು ಬಿಎನ್ಎಂಐಟಿ ಆಶ್ರಯದಲ್ಲಿ ನಡೆದ ‘ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ’ ಎನ್ನುವ ವಿಷಯದ ಕುರಿತು ಹಮ್ಮಿಕೊಂಡ ಎರಡು ದಿನಗಳ ಕಾರ್ಯಾಗಾರದಲ್ಲಿ ಸೋಮವಾರ ಅವರು ಮಾತನಾಡಿ, ‘ಇಂತಹ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಲು ಸಾಧ್ಯ’ ಎಂದು ತಿಳಿಸಿದರು.
ಬಿಎನ್ಎಂಐಟಿ ಬೆಂಗಳೂರು ಸಹಾಯಕ ಪ್ರಾಧ್ಯಾಪಕ ಜೋವಿತ್ ಅವರು ಇಂಗ್ಲಿಷ್ ವಿಷಯದ ಕುರಿತು ಮತ್ತು ಪ್ರಾಧ್ಯಾಪಕಿ ರಂಜಿತಾ ಆರ್. ಅವರು ಸಾಮಾನ್ಯ ಜ್ಞಾನ ಹಾಗೂ ಕಂಪ್ಯೂಟರ್ ವಿಷಯದ ಕುರಿತು, ಬಿಎನ್ಎಂಐಟಿ ತರಬೇತುದಾರರಾದ ರಿಷಿ ರಂಜನ್ ಅವರು ‘ಪ್ರಮಾಣಾತ್ಮಕ ಸಾಮರ್ಥ್ಯ’ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ಉಪನ್ಯಾಸಕ ಹಾಗೂ ಎಂಬಿಎ ವಿಭಾಗದ ಮುಖ್ಯಸ್ಥರಾದ ಡಾ.ಮುಖಂದ್ ಶರ್ಮ, ಸಹಾಯಕ ಪ್ರಾಧ್ಯಾಪಕ ಸಂತೋಷ, ಪ್ಲೇಸ್‌ಮೆಂಟ್ ಸೆಲ್ ಸಂಯೋಜಕಿ ಎಂ.ವೀಣಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.