ADVERTISEMENT

ರೈಲ್ವೆ ಸೇತುವೆಯ ಬಳಿ ತ್ಯಾಜ್ಯ ಹಾಕದಂತೆ ಕ್ರಮ ಕೈಗೊಳ್ಳಿ

​ಪ್ರಜಾವಾಣಿ ವಾರ್ತೆ
Published 1 ಮೇ 2019, 12:30 IST
Last Updated 1 ಮೇ 2019, 12:30 IST
ಕಾರವಾರ ತಾಲ್ಲೂಕು ಶಿರವಾಡದ ಸೇತುವೆಯ ಬಳಿ ತ್ಯಾಜ್ಯವನ್ನು ರಾಶಿ ಹಾಕಿರುವುದು
ಕಾರವಾರ ತಾಲ್ಲೂಕು ಶಿರವಾಡದ ಸೇತುವೆಯ ಬಳಿ ತ್ಯಾಜ್ಯವನ್ನು ರಾಶಿ ಹಾಕಿರುವುದು   

ಕಾರವಾರ:ಶಿರವಾಡ ರೈಲು ನಿಲ್ದಾಣದಿಂದ ಮುಂದೆ ಸಾಗಿದಾಗ ಸಿಗುವ ರೈಲ್ವೆ ಸೇತುವೆಯ ಬಳಿ ತ್ಯಾಜ್ಯದ ರಾಶಿಯೇ ಬಿದ್ದಿದೆ. ನಗರ ಹಾಗೂ ಗ್ರಾಮದ ನಿವಾಸಿಗಳು ಇಲ್ಲಿ ಅವುಗಳನ್ನು ಸುರಿದು ಹೋದಂತಿದೆ.

ಅವುಗಳಲ್ಲಿ ಬಹುಪಾಲು ಪ್ಲಾಸ್ಟಿಕ್ ಹಾಗೂ ಕಾಗದದ ನಿರುಪಯುಕ್ತ ವಸ್ತುಗಳಿವೆ. ಜೋರಾಗಿ ಗಾಳಿ ಬೀಸಿದಾಗ ಅವು ರಸ್ತೆಯ ಮೇಲೆ ಹರಡುತ್ತಿವೆ. ತ್ಯಾಜ್ಯದ ರಾಶಿಯ ಮಧ್ಯೆ ಗಾಜಿನ ಹಲವು ಬಾಟಲಿಗಳನ್ನೂ ಎಸೆಯಲಾಗಿದೆ. ಇವು ವಾಹನ ಸವಾರರಿಗೆ, ಪಾದಚಾರಿಗಳಿಗೆ ತೊಂದರೆ ಉಂಟು ಮಾಡುತ್ತಿವೆ.

ಪರಿಸರದ ಸ್ವಚ್ಛತೆಯ ಬಗ್ಗೆ ಎಷ್ಟೇ ಕಾರ್ಯಕ್ರಮಗಳನ್ನು ಆಯೋಜಿಸಿದರೂ ಜನರ ಮನಸ್ಥಿತಿ ಬದಲಾಗದಿದ್ದರೆ ಪ್ರಯೋಜನವಿಲ್ಲ. ಇಲ್ಲಿ ಈ ರೀತಿ ಕಸ ಎಸೆದರೆ ಮನುಷ್ಯರಿಗೆ ಮಾತ್ರವಲ್ಲ ಮೇವನ್ನು ಅರಸಿ ಬರುವ ಜಾನುವಾರಿಗೂ ಅಪಾಯವಾಗುತ್ತದೆ ಎಂಬ ಪರಿಕಲ್ಪನೆ ಯಾಕೆ ಮೂಡುತ್ತಿಲ್ಲ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಜನರ ಸಂಚಾರ ಕಡಿಮೆ ಇರುವುದಕ್ಕೋ ಏನೋಇಲ್ಲಿ ಕಸ ಎಸೆಯುವವರಿಗೆ ಸೂಕ್ತ ಜಾಗವಾಗಿ ಮಾರ್ಪಟ್ಟಿದೆ.

ADVERTISEMENT

ಗ್ರಾಮ ಪಂಚಾಯ್ತಿಯವರು ಕೂಡಲೇ ತ್ಯಾಜ್ಯ ವಿಲೇವಾರಿ ಮಾಡಿ ಯಾರೂ ಕಸ ಸುರಿಯದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು.

– ಚಂದ್ರಶೇಖರ, ಶಿರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.