ಸಿದ್ದಾಪುರ: ಭಾರತೀಯ ಅಂಚೆ ಇಲಾಖೆಯ ಶಿರಸಿ ವಿಭಾಗದ ಸಿದ್ದಾಪುರ ಪ್ರಧಾನ ಅಂಚೆ ಕಚೇರಿಯಲ್ಲಿ ಜೂನ್ 22 ರಿಂದ 24ರವರೆಗೆ ಆಧಾರ ತಿದ್ದುಪಡಿ ಹಾಗೂ ನೋಂದಣಿ ಬೃಹತ್ ಮೇಳ ನಡೆಯಲಿದೆ.
ಜನ್ಮದಿನಾಂಕ ಬದಲಾವಣೆಗಾಗಿ ಜನನ ಪ್ರಮಾಣಪತ್ರ, ಪಾಸ್ಪೋರ್ಟ್, ಅಂಕಪಟ್ಟಿ, ಸರ್ವೀಸ್ ಫೋಟೊ, ಐಡಿ ಕಾರ್ಡ್ ಇವುಗಳಲ್ಲಿ ಯಾವುದಾದರೂ ಒಂದನ್ನು, ಹೆಸರು ಬದಲಾವಣೆಗಾಗಿ ವಾಹನ ಚಾಲನಾ ಪ್ರಮಾಣಪತ್ರ, ಪಾಸ್ಪೋರ್ಟ್, ಅಂಕಪಟ್ಟಿ, ಮದುವೆ ಪ್ರಮಾಣಪತ್ರ, ಪ್ಯಾನ್ಕಾರ್ಡ್, ರೇಷನ್ ಕಾರ್ಡ್, ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್, ವೋಟರ್ ಐಡಿ, ಸುಪರಿಂಟೆಂಡೆಂಟ್ ಅಥವಾ ಸಂಸ್ಥೆಯ ಮುಖ್ಯಸ್ಥರು ನೀಡಿದ ಪ್ರಮಾಣ ಪತ್ರ ಇವುಗಳಲ್ಲಿ ಯಾವುದಾದರೂ ಒಂದನ್ನು, ವಿಳಾಸ ಬದಲಾವಣೆಗಾಗಿ ಪಾಸ್ಪೋರ್ಟ್, ಅಂಚೆ-ಬ್ಯಾಂಕ್ ಪಾಸ್ಬುಕ್, ರೇಷನ್ ಕಾರ್ಡ್, ವೋಟರ್ ಐಡಿ, ಇನ್ಷುರೆನ್ಸ್ ಪಾಲಿಸಿ, ವಾಸ್ತವ್ಯ ಪ್ರಮಾಣಪತ್ರ, ಮದುವೆ ಪ್ರಮಾಣ ಪತ್ರ, ಫೋಟೊ ಇರುವ ಪ್ರಮಾಣಪತ್ರ, ವಾಹನ ನೋಂದಣಿ ಇವುಗಳಲ್ಲಿ ಯಾವುದಾದರೂ ಒಂದನ್ನು ಅಗತ್ಯ ದಾಖಲೆಯಾಗಿ ತರಬೇಕು. ಮಕ್ಕಳ ಆಧಾರ ಕಾರ್ಡ್ ಮಾಡಲು ಜನ್ಮ ದಾಖಲೆ, ತಂದೆ- ತಾಯಿಯ ಆಧಾರ ಕಾರ್ಡ್ ಜೊತೆಯಲ್ಲಿ ತಂದೆ, ತಾಯಿ, ಮಗುವಿನೊಂದಿಗೆ ಬರಬೇಕು. ಮೊಬೈಲ್ ನಂಬರ್ ಬದಲಾಯಿಸಲು ಯಾವುದೇ ದಾಖಲೆ ಅವಶ್ಯವಿಲ್ಲ ಎಂದು ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದು ಈ ಕುರಿತು ಮುಂಚಿತವಾಗಿ ಅರ್ಜಿ ಪಡೆದವರಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.