ADVERTISEMENT

ರಸ್ತೆಗಿಳಿಯದ ಬಸ್: ಮ್ಯಾಕ್ಸಿಕ್ಯಾಬ್ ಸಂಚಾರ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2021, 6:42 IST
Last Updated 7 ಏಪ್ರಿಲ್ 2021, 6:42 IST
ಸಾರಿಗೆ ಸಂಸ್ಥೆ ನೌಕರರ ಮುಷ್ಕರ
ಸಾರಿಗೆ ಸಂಸ್ಥೆ ನೌಕರರ ಮುಷ್ಕರ   

ಶಿರಸಿ: ಸಾರಿಗೆ ಸಂಸ್ಥೆ ನೌಕರರ ಮುಷ್ಕರದ ಪರಿಣಾಮ ನಗರವೂ ಸೇರಿದಂತೆ ಜಿಲ್ಲೆಯ ಇನ್ನಿತರ ತಾಲ್ಲೂಕುಗಳಲ್ಲಿ ಬಸ್ ಸಂಚಾರ ಸ್ತಬ್ಧಗೊಂಡಿದೆ.

ನೂರಾರು ಬಸ್ ಗಳು ಇಲ್ಲಿನ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿ ಹಿಂಭಾಗದ ಆವರಣದಲ್ಲಿ ನಿಂತಿವೆ. ಪ್ರಯಾಣಿಕರ ಅನುಕೂಲಕ್ಕಾಗಿ ಮ್ಯಾಕ್ಸಿ ಕ್ಯಾಬ್ ಸಂಚರಿಸುತ್ತಿವೆ. ಹಳೆ ಬಸ್ ನಿಲ್ದಾಣದಲ್ಲಿ ದೂರದ ಊರುಗಳಿಗೆ ತೆರಳಲು ನಿಂತಿದ್ದ ಪ್ರಯಾಣಿಕರು ಬಸ್ ಗಳಿಲ್ಲದಪರಿಣಾಮ ಪರದಾಡುತ್ತಿದ್ದಾರೆ.

'ಹೆಚ್ಚು ಪ್ರಯಾಣಿಕರು ಇದ್ದರೆ ಮಾತ್ರ ವಾಹನ ಓಡಿಸುತ್ತೇವೆ. ಸೀಮಿತ ಸೀಟುಗಳಿದ್ದರೆ ಕಷ್ಟ' ಎಂದು ಮ್ಯಾಕ್ಸಿಕ್ಯಾಬ್ ಚಾಲಕರೊಬ್ಬರು ತಿಳಿಸಿದರು.

ADVERTISEMENT

ಬಸ್ ನಿಲ್ದಾಣಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಆರ್ ಟಿಓ ಕೂಡ ಸ್ಥಳದಲ್ಲಿ ಬೀಡುಬಿಟ್ಟು ಮ್ಯಾಕ್ಸಿಕ್ಯಾಬ್‌ಗಳ ಓಡಾಟ ಪರಿಶೀಲಿಸತೊಡಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.