ಶಿರಸಿ: ತಾಳಗುಪ್ಪ–ಹುಬ್ಬಳ್ಳಿ ರೈಲ್ವೆ ಹಳಿ ನಿರ್ಮಾಣ ಸಮೀಕ್ಷೆಯ ಎರಡನೇ ಹಂತದ ಸರ್ವೇ ಆರಂಭವಾಗಿದೆ.
ಈ ಮಾರ್ಗದ ರೈಲ್ವೆ ಯೋಜನೆಗೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದೆ. ಬಹುತೇಕ ಅರಣ್ಯ ಭೂಮಿ ತಪ್ಪಿಸಿ ಕೃಷಿ ಹಾಗೂ ಪಾಳುಬಿದ್ದ ಭೂಮಿ ಬಳಸಿಕೊಂಡು ರೈಲ್ವೆ ಮಾರ್ಗ ಸಿದ್ಧಪಡಿಸಲಾಗುತ್ತಿದೆ. ಸದ್ಯ ಬೆಂಗಳೂರಿನ ಆರ್.ವಿ.ಕಂಪನಿಯ ಎರಡು ತಂಡ ಸ್ಥಳಕ್ಕೆ ಭೇಟಿ ನೀಡಿ ಸಮೀಕ್ಷೆ ಮಾಡುತ್ತಿದೆ. ತಾಲ್ಲೂಕಿನ ಅಂಡಗಿ ಮಾರ್ಗವಾಗಿ 3 ಕಿ.ಮೀ ಆಚೆಗೆ ಸರ್ವೇ ನಡೆದಿದ್ದು, ಎಲ್ಲವೂ ಸರಿಯಾಗಿ ನಡೆದರೆ 2 ವರ್ಷದೊಳಗೆ ಭೂ ಸ್ವಾಧೀನ ಪ್ರಕ್ರಿಯೆ ನಡೆಯಲಿದೆ.
‘ಸಿದ್ದಾಪುರ ತಾಲ್ಲೂಕಿನ ಕಾವಂಚೂರು, ಸಿದ್ದಾಪುರ ಹಾಗೂ ಕುಣಜಿಯಲ್ಲಿ ರೈಲ್ವೆ ನಿಲ್ದಾಣ ಸ್ಥಾಪನೆಗೆ ಉದ್ದೇಶಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಸೊರಬದ ತೆಲಗುಂದ್ರಿ, ಶಿರಸಿಯ ಒಡ್ಡಿನಕೊಪ್ಪ, ಒಕ್ಕಲಕೊಪ್ಪ, ಗೌಡಳ್ಳಿ, ಮಳಲಗಾಂವ್ ಹಾಗೂ ಗೋಟಗಾಡಿ ಬಳಿ ನಿಲ್ದಾಣ ಸ್ಥಾಪನೆಗೆ ನಕ್ಷೆ ಸಿದ್ಧವಾಗಿದೆ. ಮುಂಡಗೋಡದ ಕಾತೂರು, ಮುಂಡಗೋಡ ಹಾಗೂ ಅಷ್ಟಕಟ್ಟಿಯಲ್ಲಿ ರೈಲು ನಿಲ್ದಾಣ ಸ್ಥಾಪಿಸುವ ಪ್ರಸ್ತಾವನೆ ನಕ್ಷೆಯಲ್ಲಿದೆ. ಹಾವೇರಿ ಜಿಲ್ಲೆಯಲ್ಲಿ ತಡಸ ಹಾಗೂ ಧಾರವಾಡ ಜಿಲ್ಲೆಯಲ್ಲಿ ಬೆಳಗಲಿ ಬಳಿ ರೈಲ್ವೆ ನಿಲ್ದಾಣ ಬರಲಿದೆ’ ಎಂಬುದು ಸಮೀಕ್ಷೆಯಲ್ಲಿ ತೊಡಗಿಕೊಂಡ ಕಂಪನಿ ಸಿಬ್ಬಂದಿ ಮಾತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.