ADVERTISEMENT

ಅಂಕೋಲಾ: ಸೆಂಟ್ರಲ್ ಐಡಿ ಪಡೆಯಲು ರೈತರಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 8:05 IST
Last Updated 28 ಫೆಬ್ರುವರಿ 2026, 8:05 IST
<div class="paragraphs"><p>ಇ-ಕೆವೈಸಿ</p></div>

ಇ-ಕೆವೈಸಿ

   

ಅಂಕೋಲಾ: ತಾಲ್ಲೂಕಿನ ಎಲ್ಲಾ ರೈತರು ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳ ಪ್ರಯೋಜನ ಪಡೆಯಲು ಇ-ಕೆವೈಸಿ ನೋಂದಣಿ ಮಾಡಿಸಿ ಕೇಂದ್ರ ಗುರುತು ( ಸೆಂಟ್ರಲ್ ಐಡಿ ) ಪಡೆಯುವುದು ಕಡ್ಡಾಯವಾಗಿದೆ.

ಇ-ಕೆವೈಸಿ ಮಾಡಿಸದ ರೈತರು ಪಿಎಂ ಕಿಸಾನ್ ಸೇರಿದಂತೆ ಇನ್ನಿತರ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಸಾಧ್ಯ ಆಗುವುದಿಲ್ಲ. ಆದ್ದರಿಂದ ಇಲ್ಲಿಯವರೆಗೆ ಸೆಂಟ್ರಲ್ ಐಡಿ ಪಡೆಯದ ತಾಲ್ಲೂಕಿನ ರೈತರು ಹತ್ತಿರದ ಗ್ರಾಮ ಒನ್ ಕೇಂದ್ರ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಮತ್ತು ರೈತ ಸಂಪರ್ಕ ಕೇಂದ್ರಗಳಲ್ಲಿ ನೋಂದಣಿ ಮಾಡಿಸುವ ಮೂಲಕ ಸೆಂಟ್ರಲ್ ಐಡಿ ಪಡೆಯಬಹುದಾಗಿದೆ.

ADVERTISEMENT

ರೈತರು ಇತ್ತೀಚಿನ ಪಹಣಿ ಪತ್ರ, ಆಧಾರ್ ಕಾರ್ಡ್ ಹಾಗೂ ಮೊಬೈಲ್ ಸಂಖ್ಯೆಯನ್ನು ಒದಗಿಸಿ ಕಡ್ಡಾಯವಾಗಿ ಇ-ಕೆವೈಸಿ ಪೂರ್ಣಗೊಳಿಸಬೇಕೆಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಪ್ರಕಾಶ ಡಾವಳೇ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.