
ಅಂಕೋಲಾ: ಪಟ್ಟಣದಲ್ಲಿ ಹಿಂದೂ ಉತ್ಸವ ಸಮಿತಿಯಿಂದ 3ನೇ ವರ್ಷದ ಹಿಂದೂ ಉತ್ಸವ ಹಾಗೂ ಬೃಹತ್ ಶೋಭಾಯಾತ್ರೆ ಜನವರಿ 23ರಂದು ನಡೆಯಲಿದೆ ಎಂದು ಹಿಂದೂ ಉತ್ಸವ ಸಮಿತಿ ಪ್ರಮುಖ ಸುನೀಲ ನಾಯ್ಕ ಹೊನ್ನೇಕೇರಿ ಹೇಳಿದರು.
ಪಟ್ಟಣದ ಖಾಸಗಿ ಹೊಟೇಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಧರ್ಮದ ರಕ್ಷಣೆ ಉದ್ದೇಶದಿಂದ ರಾಮಚಂದ್ರನ ಜನ್ಮಸ್ಥಾನ ಅಯೋಧ್ಯಾದಲ್ಲಿ ರಾಮ ಮಂದಿರ ನಿರ್ಮಾಣವಾದ ಪುಣ್ಯದಿನದ ಮರುದಿನ ಅಂದರೆ ಜ.23ರಂದು ಅಂಕೋಲಾದಲ್ಲಿ ಹಿಂದೂ ಉತ್ಸವ ಮತ್ತು ಬೃಹತ್ ಶೋಭಾಯಾತ್ರೆ ನಡೆಯಲಿದೆ ಎಂದರು.
ಹಿಂದೂ ಉತ್ಸವದಲ್ಲಿ ಯಾವುದೇ ರಾಜಕೀಯ ಪಕ್ಷವಿಲ್ಲ, ಸಮಾಜದ ಎಲ್ಲ ವರ್ಗದ ಜನರು ಈ ಉತ್ಸವದಲ್ಲಿ ಪಾಲ್ಗೊಂಡು ಹಿಂದೂ ಧರ್ಮದ ಪ್ರಾಮುಖ್ಯತೆ ಮರೆಯಬೇಕು. ಹಿಂದೂ ಉತ್ಸವದಲ್ಲಿ ಎಲ್ಲ ಸಮಾಜದವರಿಗೂ ಸಮಾನ ಅವಕಾಶವಿದೆ. ಹೀಗಾಗಿ ತಾಲ್ಲೂಕಿನ ಎಲ್ಲ ಹಿಂದೂ ಬಾಂಧವರು ಈ ಉತ್ಸವದಲ್ಲಿ ಪಾಲ್ಗೊಳ್ಳಬೇಕು ಎಂದರು.
ಹಿಂದೂ ಉತ್ಸವ ಸಮಿತಿಯನ್ನು ನೋಂದಣಿ ಮಾಡಿಸಿ ಹಿಂದೂ ಬಾಂಧವರ ಸಹಕಾರದಲ್ಲಿ ಅಂಕೋಲಾದಲ್ಲಿ ಬಡ ಹಿಂದೂಗಳು ಉಪಯೋಗಕ್ಕಾಗಿ ಹಿಂದೂಭವನ ನಿರ್ಮಾಣ ಮತ್ತು ಗೋಶಾಲೆಯೊಂದನ್ನು ಪ್ರಾರಂಭಿಸುವ ಯೋಚನೆಯೂ ಇದೆ ಎಂದರು.
ಪ್ರಮುಖರಾದ ಸುಂದರ ಖಾರ್ವಿ, ಮಂಜುನಾಥ ನಾಯ್ಕ, ಮನೋಹರ ಗಾಂವಕರ, ಲಕ್ಷ್ಮೀಕಾಂತ ನಾಯ್ಕ, ಅಂಕಿತ ಬಂಟ, ಗಿರೀಶ ಶೆಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.