ADVERTISEMENT

ಬನವಾಸಿಯ ಅಭಿವೃದ್ಧಿಗೆ ಮತ್ತೆ ₹2 ಕೋಟಿ: ಶಿವರಾಮ ಹೆಬ್ಬಾರ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 6:18 IST
Last Updated 1 ಜನವರಿ 2026, 6:18 IST
ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ವಿವಿಧ ನವೀಕೃತ ಕಾಮಗಾರಿಗಳನ್ನು ಶಾಸಕ ಶಿವರಾಮ ಹೆಬ್ಬಾರ ಉದ್ಘಾಟಿಸಿದರು
ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ವಿವಿಧ ನವೀಕೃತ ಕಾಮಗಾರಿಗಳನ್ನು ಶಾಸಕ ಶಿವರಾಮ ಹೆಬ್ಬಾರ ಉದ್ಘಾಟಿಸಿದರು   

ಶಿರಸಿ: ತಾಲ್ಲೂಕಿನ ಬನವಾಸಿ ಮಧುಕೇಶ್ವರ ದೇವಸ್ಥಾನದ ಆವರಣದಲ್ಲಿ ಅಂದಾಜು ₹2 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ವಿವಿಧ ಅಭಿವೃದ್ಧಿ ಹಾಗೂ ನವೀಕೃತ ಕಾಮಗಾರಿಗಳನ್ನು ಶಾಸಕ ಶಿವರಾಮ ಹೆಬ್ಬಾರ ಬುಧವಾರ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ‘ಸಮ್ಮುಖ ವಿರಾಂಜನೇಯ ದೇವಸ್ಥಾನ, ಹೂವಿನ ರಥದ ಕಟ್ಟಡ, ಆದಿ ಮಧುಕೇಶ್ವರ ದೇವಾಲಯ ಹಾಗೂ ಅತಿಥಿಗೃಹವನ್ನು ನವೀಕರಿಸಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲಾಗಿದೆ. ಇದರೊಂದಿಗೆ ಪಂಪವನದ ಸುತ್ತ ತಡೆಗೋಡೆ ಹಾಗೂ ₹50 ಲಕ್ಷ ವೆಚ್ಚದಲ್ಲಿ ಅಂಬೇಡ್ಕರ್ ವಸತಿ ಶಾಲೆಯ ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಲಾಗಿದೆ. ಮುಂಬರುವ ದಿನಗಳಲ್ಲಿ ಬನವಾಸಿಯ ಅಭಿವೃದ್ಧಿಗೆ ಮತ್ತೆ ₹2 ಕೋಟಿ ಮೀಸಲಿಡಲಾಗುವುದು. ಕ್ಷೇತ್ರದ ಪ್ರಗತಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು’ ಎಂದರು.

ದೇವಾಲಯದ ಆಡಳಿತಾಧಿಕಾರಿ ರಮೇಶ ಹೆಗಡೆ ಮಾತನಾಡಿ, ‘ನೂತನ ವ್ಯವಸ್ಥಾಪನ ಸಮಿತಿಯು ಒಮ್ಮತದಿಂದ ದೇವಸ್ಥಾನದ ಪ್ರಗತಿಗೆ ಶ್ರಮಿಸಲಿ’ ಎಂದು ಆಶಿಸಿದರು.

ADVERTISEMENT

ಕಾರ್ಯಕ್ರಮದಲ್ಲಿ ನೂತನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸುಧಾಕರ ಹೆಮಾದ್ರಿ ಹಾಗೂ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಪ್ರಮುಖರಾದ ರಾಜಶೇಖರ ಒಡೆಯರ, ಡಿ.ಡಿ.ಭಟ್, ಬನವಾಸಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬೀಬಿ ಆಯಿಷಾ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಗಣಪತಿ ನಾಯ್ಕ ಇದ್ದರು. ಸುಧಾಕರ ಹೆಮಾದ್ರಿ ಸ್ವಾಗತಿಸಿದರು. ಐಸಿರಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.