ಶಿರಸಿ: ತಾಲ್ಲೂಕಿನ ನೆಗ್ಗು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ವಾರದಿಂದ ಸುರಿದ ಮಳೆ–ಗಾಳಿಗೆ ನೂರಾರು ಅಡಿಕೆ ಮರಗಳು ನೆಲಕ್ಕುರುಳಿವೆ.
ಪ್ರತಿ ರೈತನ ತೋಟದಲ್ಲಿ 30ರಿಂದ 40ರಷ್ಟು ಅಡಿಕೆ ಮರಗಳು ಮುರಿದು ಬಿದ್ದಿವೆ. ಕಾಳುಮೆಣಸಿನ ಬಳ್ಳಿ ನೆಲಕ್ಕೆ ಬಿದ್ದಿದೆ. ಗಾಳಿಯ ಹೊಡೆತಕ್ಕೆ ಮರದಲ್ಲಿರುವ ಅಡಿಕೆ ಗೊನೆಗಳು ಉದುರಿಬಿದ್ದಿವೆ. ಶೇ 50ರಷ್ಟು ಬೆಳೆ ಈಗಲೇ ಹಾಳಾಗಿದೆ. 40ಕ್ಕೂ ಹೆಚ್ಚು ರೈತರು ಇದರಿಂದ ತೊಂದರೆಗೊಳಗಾಗಿದ್ದಾರೆ ಎಂದು ಎಪಿಎಂಸಿ ಸದಸ್ಯ ಗುರುಪಾದ ಹೆಗಡೆ ಬೊಮ್ಮನಹಳ್ಳಿ ತಿಳಿಸಿದ್ದಾರೆ.
ಈ ಭಾಗದಲ್ಲಿ ಸಣ್ಣ ಮತ್ತು ಅತಿ ಸಣ್ಣ ಹಿಡುವಳಿ ರೈತರೇ ಹೆಚ್ಚಾಗಿದ್ದಾರೆ. ಅಡಿಕೆ ಒಂದು ಮರಕ್ಕೆ ಹಾನಿಯಾದರೆ, ಹೊಸ ಸಸಿ ನೆಟ್ಟು ಫಲಕೊಡಲು, ಆರೆಂಟು ವರ್ಷಗಳೇ ಬೇಕಾಗುತ್ತದೆ. ಸರ್ಕಾರ ಬೆಳೆ ಹಾನಿಯ ಸಮೀಕ್ಷೆ ನಡೆಸಿ, ರೈತರಿಗೆ ಪರಿಹಾರ ಒದಗಿಸಬೇಕು ಎಂದು ಅವರು ರೈತರ ಪರವಾಗಿ ವಿನಂತಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.