ಹಳಿಯಾಳ: ‘ಬಗರ್ ಹುಕುಂ ಸಮಿತಿಯಲ್ಲಿ ಹಳಿಯಾಳ ಕ್ಷೇತ್ರದಲ್ಲಿ ಬಂದಂತ 21 ಅರ್ಜಿಗಳನ್ನು ಸಂಪೂರ್ಣವಾಗಿ ವಿಲೇವಾರಿ ಮಾಡಲಾಗಿದೆ’ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಶಾಸಕ ಆರ್. ವಿ. ದೇಶಪಾಂಡೆ ಹೇಳಿದರು.
ಇಲ್ಲಿನ ತಹಶೀಲ್ದಾರ್ ಕಾರ್ಯಾಲಯದಲ್ಲಿ ಹಳಿಯಾಳ ಕ್ಷೇತ್ರದ 7 ಪ್ರಕರಣ, ದಾಂಡೇಲಿಯ 5 ಪ್ರಕರಣ, ಜೋಯಿಡಾದ 9 ಪ್ರಕರಣವನ್ನು ವಿಲೇವಾರಿ ಮಾಡಿ ಜಮೀನು ಮಂಜುರಾತಿ ನೀಡಲಾಗಿದೆ ಎಂದು ಬುಧವಾರ ನಡೆದ ಬಗರ್ ಹುಕುಂ ಸಮಿತಿ ಸಭೆಯಲ್ಲಿ ತಿಳಿಸಿದರು.
ಹಳಿಯಾಳ, ದಾಂಡೇಲಿ, ಜೋಯಿಡಾ ತಾಲೂಕಿನಲ್ಲಿ ಬಂದಂತಹ ಎಲ್ಲ ಅರ್ಜಿಗಳನ್ನು ಕಾನೂನಿನ ರಿತ್ಯವಾಗಿ ಮಾನದಂಡಗಳನ್ನು ಅನುಸರಿಸಿ ಕಂದಾಯ ಇಲಾಖೆ ಅಧಿಕಾರಿ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಹಾಗೂ ಸಮಿತಿಯ ಮುಂದೆ ಅರ್ಜಿಗಳನ್ನು ಸಹ ಪರಿಶೀಲಿಸಿ ಜಮೀನು ಮಂಜೂರಾತಿ ನೀಡಲಾಗಿದೆ’ ಎಂದರು.
ಹಳಿಯಾಳ ತಹಶೀಲ್ದಾರ್ ಪ್ರವೀಣ ಹುಚ್ಚಣ್ಣವರ, ದಾಂಡೇಲಿಯ ಶೈಲೇಶ ಪರಮಾನಂದ, ಜೋಯಿಡಾದ ಮಂಜುನಾಥ ಮುನ್ನೊಳ್ಳಿ, ಬಗರ ಹುಕುಂ ಸಮಿತಿಯ ಸದಸ್ಯರಾದ ಜೂಲಿಯಾನಾ ಸಿದ್ದಿ, ಎಚ್ ಬಿ ಪರಶುರಾಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.