ಯಲ್ಲಾಪುರ: ತಾಲ್ಲೂಕಿನ ಉಮ್ಮಚ್ಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳೆಗದ್ದೆ ರಸ್ತೆಯಲ್ಲಿ ಗುರುವಾರ ಬೃಹತ್ ಗಾತ್ರದ ಮರವೊಂದು ಬಿದ್ದಿದೆ.
ಅಂಗನವಾಡಿ ಕಾರ್ಯಕರ್ತೆ ಅಂಬಾ ಪಟಗಾರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಪ್ಪಯ್ಯ ಪೂಜಾರಿ, ಕಾರ್ಯದರ್ಶಿ ಮೋಹನ ಸ್ಥಳಕ್ಕೆ ಭೇಟಿ ನೀಡಿ, ಗ್ರಾಮಸ್ಥರಾದ ರಮೇಶ ಪಟಗಾರ, ಗಂಗಾಧರ ಮೊಗೇರ, ಮಣಿ ಮೊಗೇರ ಇವರ ಸಹಕಾರದಿಂದ ರಸ್ತೆಗೆ ಬಿದ್ದ ಮರವನ್ನು ಕತ್ತರಿಸಿ, ರಸ್ತೆ ಸಂಚಾರ ಯೋಗ್ಯವಾಗುವಂತೆ ಮಾಡಿದರು.
ಮರ ಬಿದ್ದ ಮರದ ಟೊಂಗೆಗಳು ಪಕ್ಕದಲ್ಲಿಯೇ ಇದ್ದ ಜೆಜೆಎಂ ಯೋಜನೆಯ ಅಡಿಯಲ್ಲಿ ನಿರ್ಮಿಸಲಾದ ನೀರಿನ ಟ್ಯಾಂಕಿಗೆ ತಾಗಿದವಾದರೂ ಯಾವುದೇ ಹಾನಿ ಆಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.