
ಪ್ರಜಾವಾಣಿ ವಾರ್ತೆ
ಬಸವರಾಜ ಹೊರಟ್ಟಿ
ಯಲ್ಲಾಪುರ: ಯಲ್ಲಾಪುರದ ಮೂಲಕ ಹುಬ್ಬಳ್ಳಿಗೆ ಹೊರಟಿದ್ದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಪ್ರಯಾಣಿಸುತ್ತಿದ್ದ ಕಾರು ಬುಧವಾರ ರಾತ್ರಿ ಡೊಮಗೆರೆ ಕ್ರಾಸ್ ರಸ್ತೆಯ ಬೃಹತ್ ಹೊಂಡದಲ್ಲಿ ಸಿಲುಕಿ, ಮುಂದಕ್ಕೆ ಸಾಗದೇ ಸ್ಥಗಿತಗೊಂಡಿತು.
‘ನಂತರ ಅವರು ಖಾಸಗಿ ಕಾರುವೊಂದರಲ್ಲಿ ಕಲಘಟಗಿವರೆಗೆ ಪ್ರಯಾಣಿಸಿ ಅಲ್ಲಿಂದ ಸರ್ಕಾರಿ ಕಾರಿನಲ್ಲಿ ಪ್ರಯಾಣಿಸಿದರು’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.