ADVERTISEMENT

ಮೂಸೌಕರ್ಯ ಒದಗಿಸದಿದ್ದಲ್ಲಿ ಚುನಾವಣೆ ಬಹಿಷ್ಕಾರ: ರಾಘು ನಾಯ್ಕ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 7:27 IST
Last Updated 29 ಜನವರಿ 2026, 7:27 IST
ಅಂಕೋಲಾದಲ್ಲಿ ಹಟ್ಟಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮದವರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು  
ಅಂಕೋಲಾದಲ್ಲಿ ಹಟ್ಟಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮದವರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು     

ಅಂಕೋಲಾ: ತಾಲ್ಲೂಕಿನ ಹಟ್ಟಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಳೆ ಕೆಂದಿಗೆ, ಮಲೆಗದ್ದೆ ಲಕ್ಕಿಗುಳಿ, ಶಿಕಳಿ ತುರ್ಲಿ ಗ್ರಾಮದ ನಿವಾಸಿಗಳು ಗ್ರಾಮದ ರಸ್ತೆ ಅಭಿವೃದ್ಧಿ ಕುರಿತು ಬುಧವಾರ ಅಂಕೋಲಾ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ರಾಘು ನಾಯ್ಕ ಮಾತನಾಡಿ, ‘ಮೂಲಸೌಕರ್ಯಗಳಲ್ಲಿ ಒಂದಾದ ರಸ್ತೆ ಸಂಪರ್ಕವು ನಮ್ಮ ಗ್ರಾಮಗಳಿಗೆ ಸರಿಯಾಗಿಲ್ಲ. ಗ್ರಾಮಕ್ಕೆ ತೆರಳಲು ಮಣ್ಣಿನ ರಸ್ತೆ ಇದ್ದು, ಮಳೆಗಾಲದಲ್ಲಿ ತೊಂದರೆಯಾಗುತ್ತಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಹಲವೂ ಬಾರಿ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ’ ಎಂದರು.

ಬೆತ್ತದ ಹಳ್ಳದಿಂದ ಗ್ರಾಮದ ರಸ್ತೆ ಅಭಿವೃದ್ಧಿಗೆ ಶೀಘ್ರ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ರಸ್ತೆ ಮಾಡದಿದ್ದಲ್ಲಿ ಗ್ರಾಮದ ನಿವಾಸಿಗಳು ಎಲ್ಲರೂ ಒಟ್ಟಾಗಿ ಮುಂಬರುವ ಎಲ್ಲಾ  ಚುನಾವಣೆಗಳನ್ನು ಬಹಿಷ್ಕರಿಸುತ್ತೇವೆ. ಆದ್ದರಿಂದ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕೆಂದು ಮನವಿ ಸಲ್ಲಿಸಿದರು.

ADVERTISEMENT

ಸಂಜಯ್ ನಾಯ್ಕ, ಮಧು ಗೌಡ, ಸುರೇಂದ್ರ ಗೌಡ, ಸುರೇಖಾ ಗೌಡ, ಸಂತೋಷ್ ಗೌಡ, ಸುರೇಶ ನಾರಾಯಣ, ರಂಜನಾ, ವಿನಯ ಪಾಂಡುರಂಗ, ಪ್ರಮೋದ, ಶಿವಾನಂದ, ಮಂಜುನಾಥ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.