ಭಟ್ಕಳ: ‘ಹಿಂದೂ ಧರ್ಮವು ವಿವಿಧ ಜಾತಿಯ ಹೆಸರಿನಲ್ಲಿ ಹಂಚಿಹೋಗಿದ್ದ ಕಾಲದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಒಂದೇ ಜಾತಿ, ಒಂದೇ ಧರ್ಮ, ಒಂದೇ ಕುಲ ಎಂಬ ಸಂದೇಶದೊಂದಿಗೆ ಸಮಾಜದಲ್ಲಿ ಜಾತಿ ಪದ್ಧತಿಯನ್ನು ವಿರೋಧಿಸಿ ಮಾನವ ಜಾತಿ ಒಂದೇ ಎಂದು ಸಾರಿದರು’ ಎಂದು ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಹೇಳಿದರು.
ಸಾರದಹೊಳೆ ನಾಮಧಾರಿ ಸಭಾಭವನದಲ್ಲಿ ಭಟ್ಕಳ ಹಾಗೂ ಸಾರದಹೊಳೆ ಭಾಗದ ನಾಮಧಾರಿ ಅಭಿವೃದ್ದಿ ಸಂಘ ಮತ್ತು ತಾಲ್ಲೂಲಿ ಶ್ರೀ ನಾರಾಯಣಗುರು ಸಮಿತಿ ಜಂಟಿಯಾಗಿ ಭಾನುವಾರ ಹಮ್ಮಿಕೊಂಡಿದ್ದ 171ನೇ ನಾರಾಯಣಗುರು ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಮೂಢನಂಬಿಕೆ, ಅಶ್ಪಸ್ಯತೆ, ಜಾತಿ ಪದ್ದತಿ ವಿರುದ್ದ ಹೋರಾಡಿದ ನಾರಾಯಣಗುರುಗಳು ಶಿಕ್ಷಣದಿಂದ ಇವೆಲ್ಲವನ್ನು ಸುಧಾರಿಸಲು ಸಾಧ್ಯವಿದೆ ಎಂದು ಅನೇಕ ಶಾಲೆಗಳನ್ನು ಕೇರಳದಲ್ಲಿ ಪ್ರಾರಂಭಿಸಿ ಕಾಂತ್ರಿ ಮಾಡಿದರು. ಶಿಕ್ಷಣಕ್ಕೆ ತನ್ನದೆ ಆದ ಮಹತ್ವವಿದ್ದು, ಯಾವ ಸಮಾಜ ಶಿಕ್ಷಣದಲ್ಲಿ ಮುಂದೆ ಇದೆಯೋ ಆ ಸಮಾಜ ಬಲಿಷ್ಟವಾಗಿ ಅಭಿವೃದ್ದಿ ಹೊಂದಲಿದೆ’ ಎಂದರು.
ನಾಮಧಾರಿ ಸಮಾಜ ಗುರುಮಠದ ಅಧ್ಯಕ್ಷ ಅರುಣ ನಾಯ್ಕ ಮಾತನಾಡಿ, ‘ನಮ್ಮದೇ ಸಮಾಜದ ಶಿಕ್ಷಣ ಸಂಸ್ಥೆಯನ್ನು ತೆರೆಯಲು ನಾವೆಲ್ಲರೂ ಸಹಕರಿಸಬೇಕಾಗಿದೆ’ ಎಂದರು.
ಮಾಜಿ ಸಚಿವ ಆರ್.ಎನ್.ನಾಯ್ಕ ಮಾತನಾಡಿ, ‘ನಮ್ಮ ಸಮಾಜವು ಇಂದು ಆಡಂಬರಗಳಿಗ ಹೆಚ್ಚಿನ ಮಹತ್ವ ನೀಡುತ್ತಿದೆ. ಈ ಸಂಪ್ರದಾಯವನ್ನು ಬಿಟ್ಟು ನಾವು ಅನಾದಿ ಕಾಲದಿಂದ ಪೂಜೆ, ಪುರಸ್ಕಾರ ಮಾಡಿ ದೇವರುಗಳಿಗೆ ಮೊದಲ ಪ್ರಾಶಸ್ತ್ಯ ನೀಡಬೇಕು’ ಎಂದು ತಿಳಿಸಿದರು.
ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ಜೆ.ಡಿ.ನಾಯ್ಕ, ಹಳೆಕೋಟೆ ಹನುಮಂತ ದೇವಸ್ಥಾನದ ಟ್ರಸ್ಟಿ ಸುಬ್ರಾಯ ನಾಯ್ಕ ಮಾತನಾಡಿದರು.
ಶಿವಾನಂದ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶ್ರೀ ನಾರಾಯಣಗುರು ಸಮಿತಿಯ ತಾಲ್ಲೂಕು ಘಟಕ ಅಧ್ಯಕ್ಷ ಮನಮೋಹನ ನಾಯ್ಕ, ಭಟ್ಕಳ ನಾಮಧಾರಿ ಸಮಾಜದ ಅಭಿವೃದ್ದಿ ಸಂಘದ ಉಪಾದ್ಯಕ್ಷ ಎಂ.ಕೆ. ನಾಯ್ಕ, ಮಾವಳ್ಳಿ ನಾಮಧಾರಿ ಅಭಿವೃದ್ಧಿ ಸಂಘದ ಉಪಾಧ್ಯಕ್ಷ ನಾಗೇಂದ್ರ ನಾಯ್ಕ, ಈಶ್ವರ ನಾಯ್ಕ, ಶಿಕ್ಷಣ ನಾರಾಯಣ ನಾಯ್ಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.